ಕವಿತೆಯ ಸಾಲುಗಳಾಗಬಲ್ಲವೇ,
ಮನಸು ಕಂಡ ಕನಸುಗಳೆಲ್ಲವೂ
ಬದುಕ ಬರೆಯಬಲ್ಲವೇ...
ಮನಸು ಗುನುಗಿದ ಸಾಲುಗಳೆಲ್ಲ
ಸಂಗೀತವಾಗಬಲ್ಲದೆ ಬದುಕಿಗೆ,
ಮೌನವಾಗೇ ಉಳಿದ ಪದಗಳೆಲ್ಲ
ಶಾಂತವಾಗಿಸಬಲ್ಲುದೇ ಮನಸ ಕಡಲನು...
ಆಸೆಯ ಬೆನ್ನು ಹತ್ತಿದ ಬದುಕಿಗೆ
ಸಿಗಬಹುದೇ ಇಲ್ಲಿ ಅಲ್ಪ ತೃಪ್ತಿಯೂ,
ಕನಸುಗಳು ಸಾಕಾರಗೊಂಡ ಮನಸಿಗೆ
ಸಿಗಬಹುದೇ ಇಲ್ಲಿ ಆತ್ಮ ಸಂತೃಪ್ತಿಯೂ...
ಪ್ರಶ್ನೆಗಳ ಸಂತೆಯೊಳಗೆ ಸಂಜೆ ಸರಿಯುತ್ತಾ
ಬದುಕ ಬೆಳದಿಂಗಳಾ ರಾತ್ರಿಗಳೊಳಗೆ,
ಉತ್ತರವು ಸಿಗಬಹುದೇ ಬದುಕ ಮುಂಜಾನೆಗೆ
ನೇಸರನು ಬೀರುವನೇ ಹೊಸ ಬೆಳಕೊಂದನು...