18 October, 2012

ಮೌನಿಯಾಕದೆ



ನಿನ್ನ ಮೌನದ ಪರಿಗೆ ಕಳೆದು ಹೋಗಿದೆ ಮನವು,
ನೆನಪುಗಳ ಗೂಡೀಗ ನುಚ್ಚುನೂರಾಗಿದೆಯಿಲ್ಲಿ.
ಚಂದ್ರಬಿಂಬವೂ ಕೂಡ ಮೈಯ ಸುಡುತಿದೆ ನಲ್ಲೆ,

ಅರೆ ತೆರೆದ ರೆಪ್ಪೆಯಲೂ ನಿನ್ನ ಕನಸಿದೆಯಲ್ಲೆ.
ಈ ಮೌನವೇತಕೆ ಇಂದು ಹೇಳೆ ಸಖಿ?
ಹೊತ್ತು ಸರಿಯುವ ಮುನ್ನ ಮೌನ ಕರಗಿಸು ಗೆಳತಿ.
ಮನವ ತೆರೆದಿಟ್ಟು ಒಲವ ತೋರು ಬಾರೆ,
ನಿನ್ನ ಮುನಿಸಿಗೆ ಕಾರಣವ ಹೇಳು ಬಾರೆ.
ಮೌನ ಮರೆತು ಪ್ರೀತಿ ಲತೆಯಾಗು ಹುಡುಗಿ,
ನೆನಪಿನಾಳದಿ ಕಳೆದುಹೋಗುವ ಮುನ್ನ ಪ್ರೀತಿಯರಳಿಸು ಬಾ ಒಲವೇ...

ಪ್ರೀತಿಯ ಹನಿ

 *ರೂಪ*
ಚೆಲುವೆ
ನಿನ್ನ
ನೆನಪಾದಾಗಲೆಲ್ಲಾ
ಸಿಗುವುದು
ನನ್ನ
ಭಾವನೆಗಳಿಗೆ
ಒಲವಿನಾ ರೂಪ.

 *ಶಾಪ*
ಗೆಳತಿ
ನಿನ್ನ
ನಗುವೆನಗೆ
ಅಮೃತ ಸಿಂಚನ,
ಮೌನವದುವೇ
ಶಾಪ !

 *ನೆನಪು*
ಗೆಳತಿ
ನೀ
ದೂರಾದರೇನು,
ಮಾಸಿ
ಹೋದಾವೇನು
ನಿನ್ನ
ನೆನಪುಗಳು ?

  *ಆಣೆ*
ನೀ
ನನ್ನ
ಮರೆತರೂ,
ನಾನಿಂದು
ಮರೆತಿಲ್ಲ
ನಿನಗಿತ್ತ
ಪ್ರೀತಿಯ ಆಣೆ !

  *ಕನಸು*
ಕಣ್ಮುಚ್ಚಿದರೂ,
ಕಣ್ತೆರೆದರು
ಕಾಡೋ
ಕನಸು
ಅದು
ನೀನೇನೆ.

 * ಇಷ್ಟ-ಕಷ್ಟ *
ಅವಳಂದ್ರೆ
ನಂಗೆ
ತುಂಬಾ
ಇಷ್ಟ,
ಆದ್ರೆ
ಆಕೆ
ಕೇಳಿದೆಲ್ಲವ
ಕೊಡಿಸೋದು
ತುಂಬಾ
ಕಷ್ಟ- ಕಷ್ಟ.

 * ಆಸೆ *
ಆಸೆಯೇ
ದುಖಃಕ್ಕೆ
ಮೂಲ
ಅಂದಿದ್ದಕ್ಕೆ
ಹೇಳೇಬಿಟ್ಟಳಲ್ಲ,
ನಲ್ಲ
ಅತಿಯಾಗಿ
ಬಯಸಬೇಡ
ನನ್ನ!!!
 
*ಒಲವ ಚಿಲುಮೆ*
ನಿನ್ನ
ಒಲವೆಂಬ
ಚಿಲುಮೆಯಲಿ
ಬತ್ತದಿರಲಿ
ಗೆಳೆಯ
ಪ್ರೀತಿಯಾ
ಹನಿ.

*ಪ್ರೀತಿಯ ಹೂ*
ಮನಸಿನ
ತೋಟಕ್ಕೆ
ಬೇಲಿ
ಹಾಕದಿರು
ಹುಡುಗ
ಬಾಡಿ
ಹೋದಿತು
ಒಲವ
ಲತೆಯಲ್ಲಿ
ಪ್ರೀತಿಯ ಹೂ.

*ಕನಸು*
ನಿದ್ದೆಯಲಿ
ಬಂದು
ಕನಸ
ಕದಿಯಬೇಡ
ಚೆಲುವೆ
ಆ ಕನಸುಗಳೆಲ್ಲಾ
ನಿನ್ನವೇ.