24 May, 2023

ಕನಸೊಂದು ಶುರುವಾಗಿದೆ...

ಹಗಲಿಗೆ ಹೆಗಲಾಗುವ
ಕನಸೊಂದು ಬೇಕಾಗಿದೆ,
ಇರುಳಿನ ಮಡಿಲೊಳು
ತೊಟ್ಟಿಲೊಂದು ತೂಗುತಾ...

ಅರಿವಿನ ಮರೆಯೊಳು
ಕ್ಷಮೆಯೊಂದು ಬೇಕಾಗಿದೆ,
ಮಮತೆಯ ಮಡಿಲೊಳು
ಮಗುವಾಗಿ ನಲಿಯೋಕೆ...

ಮನಸಿನ ಮನೆಯೊಳಗೆ
ಒಲವಿಂದು ಶುರುವಾಗಬೇಕಿದೆ,
ನೆನಪುಗಳ ಹಂಗನು ತೊರೆದು
ಬದುಕಿಲ್ಲಿ ನಡೆಯಬೇಕಾಗಿದೆ...

ಕಾಲದ ಯಾತ್ರೆಯಲಿ
ಮನಸಿಲ್ಲಿ ನಗಬೇಕಾಗಿದೆ,
ಲೋಕದ ಜಾತ್ರೆಯಲಿ
ಬದುಕಿಲ್ಲಿ ಸಂಭ್ರಮಿಸಬೇಕಿದೆ...

No comments:

Post a Comment