ಮೌನವಾಗಿದೆ ಬದುಕು ಇಲ್ಲಿ
ಮೂಕ ಮನಸಿನ ರೋಧನೆಯಲಿ,
ಬದುಕ ಭರವಸೆಯನು ಹಿಂಡಿದೆ
ಹೇಳಲಾಗದ ನೋವದು...
ಜಗದ ತುಂಬಾ ಕತ್ತಲೂ
ಆರುತಿಹುದು ಭರವಸೆಯ ಕನಸದು,
ಬಾಳ ದಾರಿಯ ಬೆಳಕನು
ಮನಸು ಹುಡುಕಿದೆ ಸುತ್ತಲೂ...
ನೋವ ಮರೆತು ಸಾಗಲೂ
ಕಾರಣವೂ ನೂರಾರಿದೆ,
ನಗುವ ಜೊತೆಯೂ ಕಾಡಲು
ನೋವು ಬದುಕಲಿ ಸಾವಿರ...
ಮಿಡಿಯುವ ಮನಸಿಗೇ
ಕಾರ್ಯ ಕಾರಣವು ತಿಳಿಯದೂ,
ನೋವೆಂಬ ಮನಸಿನ ಭಾವವೂ
ಮತ್ತೆ ಮತ್ತೆ ಮಥಿಸಿದೇ ಬದುಕನು...
No comments:
Post a Comment