ಕಳೆದು ಹೋದವರ ಹುಡುಕಬಹುದು
ಸಿಕ್ಕಿದರು ಸಿಗಬಹುದು ಜಗದ ಜಾತ್ರೆಯಲಿ,
ಬಿಟ್ಟು ಹೋದವರ ಹುಡುಕಬಹುದೇ,
ಕಾಣಬಹುದೇ ಅವರ ಚುಕ್ಕಿ ತಾರೆಗಳ ನಡುವೆ...
ಲೋಕದಾ ಜಂಜಡದೊಳು ಕಳೆದುಹೋದವರ
ಕಳೆದು ಹೋಗಿ ತಮ್ಮನ್ನೇ ಮರೆತುಹೋದವರ,
ಹುಡುಕಾಡ ಹೊರಟರೆ ಸಿಗಬಹುದೇ
ಜಗವ ಬಿಟ್ಟು ಹೊರನಡೆದವರು...
ಹೇಳದೇ ಕೇಳದೇ ಹೊರಟುಹೋದವರ
ಮರಳಿ ಕರೆಯಲಾಗದೆ ಜಗದೊಳಗೆ,
ಕಾರಣವಿಲ್ಲದೇ ಹೊರಟವರ
ತಡೆಯಲಾದೀತೆ ಮನಸೊಳಗೆ...
ಸಂಬಂಧಗಳ ಬಿಟ್ಟು ನಡೆದವರ
ಮನಸು ಮರೆತರೂ ಮರೆಯಬಹುದು,
ಕಾಲದ ಕರೆಗೆ ಓಗೊಟ್ಟು ನಡೆದವರ
ಸದಾ ಹುಡುಕುವುದು ನೀಲ ಆಕಾಶದೊಳಗೆ...
No comments:
Post a Comment