16 August, 2025

ದೂರ ತೀರ...

ದೂರ ತೀರದ ಸಾಗರ 
ಕಣ್ಣೆದುರು ಹರಡಿದೆ ಅಲೆಗಳ,
ಬದುಕು ಇಲ್ಲಿ ಭವ ಸಾಗರ 
ದಾಟಲಾಗದು ಹಾಗೆ ಸುಮ್ಮನೆ...

ಅನಂತವಿಲ್ಲಿ ಆಗಸ 
ನಿತ್ಯ ಹೊಳೆಯುವ ಚುಕ್ಕಿ ಚಂದಿರ,
ಮನಸು ಅಂತ್ಯವಿಲ್ಲದ ಮಂದಿರ 
ನೂರು,ಸಾವಿರ ಕನಸಿನ ಚಪ್ಪರ...

ಬಿರುಸಾಗಿ ಬೀಸೊ ಮಾರುತ 
ಹೊತ್ತು ತರುವುದು ಮಳೆಯನು,
ಕಾಲಚಕ್ರದ ಬಿರುಗಾಳಿಯು
ಹೊತ್ತು ಬರುವುದು ಕಣ್ಣ ಹನಿಗಳ...

ನಾಳೆಗಳೆಂಬ ಭರವಸೆಗಳೊಳಗೂ
ಇದ್ದಂತೆ ಇರಬೇಕು ಸುಮ್ಮನೆ,
ಭಾರವಾದ ಕನಸುಗಳ 
ಬದುಕಲ್ಲಿ ಹೊರುವುದ ಬಿಡಬೇಕು...