ನಗುತಲಿರು ಮುದ್ದು ಮನವೇ,
ಲೋಕವೆಂದಿಗೂ ನಗುವುದು ಹಿಂದೆ
ಸಾಗುತಿರು ನೀ ಎಂದೂ ಮುಂದೆ...
ಅಳುವಿಲ್ಲದ ಜೀವವೂ ಇಲ್ಲ
ಅಳುಕಿಲ್ಲದ ಭಾವವೂ ಇಲ್ಲ,
ಮರುಗದಿರು ನೀನು ಸುಮ್ಮನೆ
ಸಾಗುತಲಿರಲಿ ನಿನ್ನಯ ಪಯಣ...
ಸಾಗುವುದು ಕಾಲದ ನಿಯಮ
ಹೆಜ್ಜೆ ಹಾಕುವುದು ಬಾಳಿನ ನಿಯಮ,
ನಗುವಿರಲಿ ಅಳುವಿರಲಿ ಮನಸೇ
ಸಾಗುತಿರು ಕನಸುಗಳ ಜೊತೆಗೆ...
ಬದುಕು ಇಲ್ಲಿ ಒಂಟಿ ಪಯಣ
ಹುಟ್ಟಿನಿಂದ ಬಿಟ್ಟುಹೋಗುವವರೆಗೂ,
ಸಿಕ್ಕವರೆಲ್ಲ ನಮ್ಮವರೇ ಅಲ್ಲಾ
ನಮ್ಮಂತೆ ಅವರೂ ಒಂಟಿಗಳೇ ಎಲ್ಲಾ...
No comments:
Post a Comment