ಬದುಕಿಲ್ಲಿ ಒಂಟಿ ಹಕ್ಕಿಯ ಹಾಗೆ,
ವಿರಹವಾದರೂ ಸರಿ ನೋವಾದರೂ ಸರಿಯೇ
ಕೇಳುವುದಕೇ ಬರೀಯ ಚಿಲಿಪಿಲಿಯು ಅಷ್ಟೇ...
ಮರೆತೆನೆಂದರೂ ಮರೆಯಲಾಗದು ಇಲ್ಲಿ
ನೆನಪುಗಳ ಒಡನಾಟವು ಹೀಗೆ,
ದೂರ ದೂರ ಮನಸು ತುಂಬಾ
ಒಂಟಿತನದ ಭಾರವ ಹೊತ್ತು...
ಕಂಗಳಲಿ ಸಾವಿರ ಕನಸುಗಳ ತುಂಬಿ
ಎದೆಯೊಳಗೆ ನೂರು ಅಳುಕನು ಮುಚ್ಚಿ,
ಅವಮಾನಗಳ ಮೆಟ್ಟಿ ನಡೆದು
ಬದುಕು ನಗಲು ಪಡಬೇಕಿದೆ ಪಾಡು...
ಕಳೆದುಕೊಂಡ ಒಂದು ಗಳಿಗೆ
ಬದುಕನು ಹಿಂಡುವ ಪ್ರತಿ ಕ್ಷಣವೂ ಇಲ್ಲಿ,
ಖುಷಿಕೊಡದ ಪಯಣವು ಇದು
ನಿತ್ಯ ನಿರಂತರ ಮುಗಿಯದಂತೆ...