ಮನಸನು ಬೆಳಗುವ ಬೆಳಕನು,
ಕತ್ತಲೆಯ ಕರಗಿಸುವ ಬೆಳಕನು
ಲೋಕಕೆ ದೀಪವಾಗುವ ಬೆಳಕನು...
ಬೆಳಗಿಸು ಮನದಲಿ ಏಕಾಗ್ರತೆಯೆಂಬ ಬೆಳಕನು
ಜ್ಞಾನದ ದೀಪವ ಬೆಳಗುವ ಬೆಳಕನು,
ಕೋಟಿ ಕನಸುಗಳ ಹುಟ್ಟಿಸೋ ಬೆಳಕನು
ಬದುಕಲಿ ನಗುವ ಹರಸುವ ಬೆಳಕನು...
ಬೆಳಗಿಸು ಕರ್ಮದ ಬೆಳಕನು ಬದುಕೇ
ಪುಣ್ಯದಂತೆ ಹಿಂಬಾಲಿಸೋ ಬೆಳಕಿನ ಕಿಡಿಯನು,
ಕತ್ತಲೆಯೊಳು ಮಿಂಚಂತೆ ಮಿನುಗೋ ಬೆಳಕನು
ಧರ್ಮವ ಧರಿಸುವ ಬೆಳಕನು...
ಬದುಕೇ ಬೆಳಗಿಸು ಭಕ್ತಿಯೆಂಬ ಕಿಡಿಯನು
ಮನವ ಮಂದಿರವಾಗಿಸುವ ಬೆಳಕನು,
ಹರಸು ಕೋಟಿ ತಾರೆಗಳ ಬೆಳಕನು
ಆತ್ಮವೇ ಪರಮಾತ್ಮನಾಗುವ ಬೆಳಕನು...
No comments:
Post a Comment