09 September, 2013

ಮನಸ ಹಾಳೆಯಲಿ...


ಒಲವ ಹುಡುಕಾಟದಿ
ಮನಸು ಸೋತಿದೆ,
ನಿನ್ನ
ನಗುವ ಸಿಂಚನ
ಬೇಕಿದೆ ಹುಡುಗಿ
ಹೊಸ ಕನಸೊಂದು
ಚಿಗುರಲು.

*********

ಒಂಟಿ ಪಯಣಕೆ
ಜೊತೆಯಾದ
ನೆನಪುಗಳಿಗೂ
ವಿದಾಯ ಹೇಳಿರುವೆ
ಹುಡುಗಿ,
ಬಾಳ ದಾರಿಯಲಿ
ನೀನೇ
ಜೊತೆಯಿರಲು
ನೆನಪುಗಳ
ಹಂಗೇಕೆ
ಎನಗೆ...

2 comments:

  1. ಮದುವೆಯ ಕರೆಯೋಲೆಗೂ ಬಳಸಿಕೊಳ್ಳಬಹುದಾದ ಅಕ್ಕರೆಯ ಸಾಲುಗಳಿವು.

    ReplyDelete
  2. ಒಂಟಿ ಬಾಳು, ಬಾಳೇ ಅಲ್ಲ; ಜಂಟಿ ಬೇಕೆಂದರೆ ನಿನ್ನ ಹುಡುಕಾಡದ ದಿನವಿಲ್ಲ ಬರೀ ನಿನ್ನ ನೆನಪುಗಳಲ್ಲೇ ನಾ ಕಾಲ ಕಳೆಯ ಬೇಕೆ ನೀ ಹೇಳು ಗೆಳತಿ. ಮನದ ಭಾವನೆಗಳ ಎಲ್ಲೂ ರಸ ಭಂಗವಾಗದೆ ನಿರೂಪಿಸಿದ ರೀತಿ ನನ್ನಗಿಷ್ಟವಾಯಿತು.

    ReplyDelete