29 May, 2014

ಹುಡುಕಾಟ...


ಪ್ರೀತಿಯ ಮಕರಂ
ವ ಚೆಲ್ಲುತಾ
ನನಗಾಗಿ ಅರಳೋ ಸುಮವದು ಯಾವುದೋ

ತುಟಿಯಂಚಲಿ ಮಿನುಗುವಾ
ನಸುನಗೆಯದು ಯಾವುದೋ


ಕಣ್ಣಂಚಲಿ ನೂರುಭಾವವ ಬೆರೆಸಿದ
ಒಲವ ನೋಟವು ಯಾವುದೋ

ಸುಮ್ಮ ಸುಮ್ಮನೆ ನಗಿಸುವಾ
ನೆನಪ ಕಚಗುಳಿಯದು ಯಾವುದೋ

ನೋವಿಗೆ ನಗುವ ಬೆರೆಸಿ
ಹರಸೋ ಮನಸದು ಯಾವುದೋ

ಮನಸ ತುಂಬುವ ಕನಸಿಗೆ
ಸ್ಪೂರ್ತಿಯ ಸೆಲೆಯದುವು ಯಾವುದೋ

ಎನ್ನೆದೆಯಾ ಸಾಗರದ ಭೊರ್ಗರೆತವ ಮೀರಿ
ಒಡಲ ಸೇರುವ ನದಿಯದು ಯಾವುದೋ.

2 comments: