13 June, 2014

ಹಾಗೇ ಸುಮ್ಮನೆ...



ಮಾಯೆಯಂಥ ಬದುಕಲಿ
ಮನಸಿಗೇನೋ ನೂರು ಹಂಬಲ,
ಬುದ್ಧನಾಗಲು ಬಿಡದ ಮನಸಲಿ
ಕನಸುಗಳ ಸಪ್ತ ಸಾಗರ.
ಭಾವ ರಾಗಗಳ ಮಿಲನದಿ
ಬದುಕೇ ಏನೋ ಸುಂದರ,
ಪ್ರಬುದ್ಧನಾಗಲು ಹಂಬಲಿಸುವ
ಮನಸಿಗಿಲ್ಲುಂಟು ನೂರು ಕಳವಳ.
ಬಿಡದೆ ಕಾಡುವ ಕನಸಿಗೂ
ಬಿಡುವು ಬೇಡಿದೆ ಮನಸೀಗ,
ನೆನಪುಗಳ ಜೊತೆಗಿನ ಪಯಣಕೆ
ಒಲ್ಲೆ ಎಂದಿದೆ ಬದುಕೀಗ.
ಹುಟ್ಟು ಸಾವಿನ ಅನಿವಾರ್ಯದಂತೆ
ಜೊತೆಯಾಗಿದೆ ಮನಸಿನ ತುಮುಲ,
ಯಾಕೋ ಏನೋ ತಿಳಿಯದಾಗಿದೆ
ಈ ಹೊಸ ಬಗೆಯ ತಳಮಳ.
ಭಾವ ಮರೆತ ಕಾವ್ಯವಾಗಿದೆ
ಮನಸು ತನ್ನ ಹಂಬಲಕೆ,
ವಿರಹ ತುಂಬಿದ ಕಾದಂಬರಿಯಂತೆ
ಕಾಡುತಿದೆ ಈ ಬದುಕು ಚಂಚಲ.
ಭರವಸೆ ಬೆರೆತ ಕನಸುಗಳು
ದೂರ ಸರಿದಿವೆ ಸುಮ್ಮನೆ,
ಬದುಕ ಬರೆಯುವ ಪ್ರೀತಿಗೂ
ಹೇಳಬೇಕಿದೆ ಕೈ ಹಿಡಿದು ಮುನ್ನಡೆಸಲು.

2 comments:

  1. "ನೆನಪುಗಳ ಜೊತೆಗಿನ ಪಯಣಕೆ
    ಒಲ್ಲೆ ಎಂದಿದೆ ಬದುಕೀಗ"
    ಭೇಷ್... ಭೇಷ್... ಕವಿವರ್ಯ...

    ReplyDelete