17 July, 2014

ಒಲವೇ ನಿನಗಾಗಿ...



ಕನಸೊಂದು ಶುರುವಾಗಿದೆ ನೀನಿಲ್ಲದೇ,
ಜೊತೆಯಾಗಿ ನೀ ಬೇಕೀಗ ಅದ ನನಸಾಗಿಸೆ.
ನಗುವೊಂದು ತಾನಾಗೇ ಹೊರಹೊಮ್ಮಿದೆ,
ಒಲವೇ ಕಾರಣ ನೀನಾಗಬೇಕೆಂದು ಮನ ಬಯಸಿದೆ.

ಭಾವವು ಚಿಗುರೊಡೆದಿದೆ ಹರುಷದಲೇ,
ನಿನ್ನೊಲುಮೆಯುಬೇಕಿದೆ ನಲಿವಾಗಿಸೇ.
ಪ್ರೀತಿಯ ಸುಮವೊಂದು ತಾನರಳಿದೆ,
ನಿನ್ನ ಆರೈಕೆಬೇಕೆಂದು ತಾ ಬೇಡಿದೆ.

ರಾಗವು ತಾನಾಗೆ ಅನುರಣಿಸಿದೆ,
ಪಲ್ಲವಿ ನೀನಾಗಬೇಕೆಂಬ ಹಂಬಲದೇ.
ನೆನಪುಗಳ ಮೆರವಣಿಗೆ ತಾ ಹೊರಟಿದೆ,
ಸಾರಥಿ ನೀನಾಗಬೇಕೆಂದು ಮನ ಹೇಳಿದೆ.

ದುಂಬಿಯು ಮನಸೀಗ ಖುಷಿಯಿಂದಲೇ,
ನಿನ್ನ ಪ್ರೀತಿಯ ಮಕರಂಧ ಬೇಕಾಗಿದೆ.
ಜೊತೆ ನೀಡು ಬಾ ಗೆಳತಿ ಒಲವಿಂದಲೇ,
ಕೈಹಿಡಿದು ನಾ ನಡೆಸುವೆ ಉಸಿರ ಕೊನೆವರೆಗೇ.

2 comments:

  1. ಹಿಂದಿನ ಕವನವನ್ನು ನನಸಾಗಿಸುವತ್ತ, ಈ ಕವನದ ಚಿತ್ತ...

    ReplyDelete