ಕರಗಿಹೋದ ಕನಸಿಗೆ
ಬರೆಯಬೇಕು ಮುನ್ನುಡಿ,
ಮರೆತುಹೋದ ಭಾವಕೂ
ನೀಡಬೇಕಿದೆ ಜೀವನ.
ನೋವ ಪರದೆ ಸರಿದಿದೆ
ನಲಿವು ಕೈಯ ಹಿಡಿದಿದೆ,
ಮನದ ಕತ್ತಲೆಯ ಕರಗಿಸಿ
ಒಲವ ಬೆಳಕು ತುಂಬಬೇಕಿದೆ.
ಸುಟ್ಟುಹೋದ ಕನಸಿಗೆ
ಹೊಸ ಜನ್ಮವೊಂದು ಸಿಕ್ಕಿದೆ,
ಮನಸಿನಾಳದಿಂದ ತೆಗೆದ
ಹೊಸ ಉಡುಗೆಯೊಂದ ತೊಡಿಸಬೇಕಿದೆ.
ಸರಸ ವಿರಸದ ನಡುವಲಿ
ಕೊಚ್ಚಿಹೋದ ಭಾವಕೇ,
ಹೊಸ ಚೈತನ್ಯವ ತುಂಬಲು
ಸಂಭಂಧವೊಂದು ಬೇಕಿದೆ.
ಭಾವವದುವು ಚಿಗುರಲು
ಒಲವದುವು ಮತ್ತೆ ಮತ್ತೆ ಬೇಕಿದೆ,
ಕನಸುಗಳ ಮರುಹುಟ್ಟಿಗೆ
ನಿನ್ನೊಲವು ಸದಾ ಬೇಕಿದೆ...
ನಲಿವು ಕೈಯ ಹಿಡಿದಿದೆ,
ಮನದ ಕತ್ತಲೆಯ ಕರಗಿಸಿ
ಒಲವ ಬೆಳಕು ತುಂಬಬೇಕಿದೆ.
ಸುಟ್ಟುಹೋದ ಕನಸಿಗೆ
ಹೊಸ ಜನ್ಮವೊಂದು ಸಿಕ್ಕಿದೆ,
ಮನಸಿನಾಳದಿಂದ ತೆಗೆದ
ಹೊಸ ಉಡುಗೆಯೊಂದ ತೊಡಿಸಬೇಕಿದೆ.
ಸರಸ ವಿರಸದ ನಡುವಲಿ
ಕೊಚ್ಚಿಹೋದ ಭಾವಕೇ,
ಹೊಸ ಚೈತನ್ಯವ ತುಂಬಲು
ಸಂಭಂಧವೊಂದು ಬೇಕಿದೆ.
ಭಾವವದುವು ಚಿಗುರಲು
ಒಲವದುವು ಮತ್ತೆ ಮತ್ತೆ ಬೇಕಿದೆ,
ಕನಸುಗಳ ಮರುಹುಟ್ಟಿಗೆ
ನಿನ್ನೊಲವು ಸದಾ ಬೇಕಿದೆ...
ಒಲವದುವು ಮತ್ತೆ ಮತ್ತೆ ಬೇಕಿದೆ,
ReplyDeleteಎಂಬುದಂತೂ ಸರ್ವತ್ರ ಒಮ್ಮತದ ಬೇಡಿಕೆ.