22 March, 2015

ಧಮ೯ ಉಳಿಸು ತಾಯೇ...


ಭೂಮಿ ತಾಯಿಯೇ ಹೇಳಮ್ಮಾ
ಬರೀಯ ನೋವೇ ತುಂಬಿತೇ ನಿನ್ನ ಮಡಿಲಲ್ಲಿ,
ನ್ಯಾಯಕ್ಕೆ ನೆಲೆಯೇ ಕಳೆದೋಯ್ತೆ?
ಸತ್ಯಕ್ಕೆ ಬೆಲೆಯೇ ಇಲ್ಲವೇನಮ್ಮಾ.
ಕಂಸ,ಕೀಚಕರು ಮೆರೆಯುತಿಹರಮ್ಮಾ
ರಾಮ,ಕೃಷ್ಣರಿಗೇ ಜನ್ಮ ನೀಡಬಾರದೇ,
ಧಮ೯ದ ಅಥ೯ವೇ ಕಳೆದೋಯ್ತು
ಬದುಕಬೇಕೇ ಭಯದ ನೆರಳಿನಲಿ.
ರಾಕ್ಷಸರಾಳುತಿಹ ನಾಡಿನಲಿ
ನ್ಯಾಯನೀತಿಗೆ ಬೆಲೆಯೆಲ್ಲಿ,
ಭ್ರಷ್ಟ ದುಷ್ಟರ ಕೊನೆಗಾಣಿಸಿ
ಶಿಷ್ಟರ ಪೊರೆಯಲು ನೀನು ಬರಬಾರದೇ.
ಅಂಧಕಾರವೇ ಮೆರೆಯುತಿದೆ
ಮನುಜ ತತ್ವವ ಮರೆಸುತಿದೆ,
ದಾನವ ಗುಣವೇ ಮೇರೆ ಮೀರುತಿದೆ
ಜಗಜನನಿಯಾಗಿ ನೀ ಬರಬಾರದೇ.
ಕ್ರಾಂತಿಯ ಕಿಡಿಗೆ ನೀನು ಜನ್ಮ ನೀಡಬಾರದೇ
ಸತ್ಯ ಧಮ೯ಕೆ ನೆಲೆಯ ನೀಡಬಾರದೇ,
ಸಹನೆಯ ಸ್ವಲ್ಪ ನೀನು ಬದಿಗಿಡಬಾರದೇ
ಬಾಯ್ಬಿಟ್ಟು ದುಷ್ಟರ ದಮನ ಮಾಡಬಾರದೇ...

2 comments:

  1. ಜಗಜನನಿಯಾಗಿ ಆಕೆ ಉದಯಿಸಬೇಕಾದ ಕೆಟ್ಟ ಕಾಲವಿದು!
    ಇಲ್ಲಿ ಸ್ತ್ರೀಗಿಲ್ಲ ರಕ್ಷಣೆ, ಗಂಡಿಗೂ ಶತ ಘರ್ಷಣೆ!
    ದುರ್ಗಿ ಚಾಮುಂಡಿ ಕಾಳಿಯಾಗಿ ನೀ ಬಾ ತಾಯೇ...

    ReplyDelete