ಮನಸ ಶರಧಿಯೊಳು ನೂರು ಭಾವಗಳ ಮೊರೆತ
ನೋವು ನಲಿವುಗಳ ಅಲೆಯ ಭೊಗ೯ರೆತ,
ಕಾಣದ ದಡಗಳವು ನಿನ್ನೆ ನಾಳೆಗಳು
ಪಯಣ ಸಾಗಿದೆ ಇಂದಿನ ದೋಣಿಯೊಳು.
ಶಾಂತ ಸಾಗರದಿ ಚಿಂತೆಗಳ ಬಿರುಗಾಳಿ
ಎದ್ದರೂ ಏಳಬಹುದು ಅಲ್ಲೊಂದು ಸುನಾಮಿ,
ಕೊಚ್ಚಿ ಹೋಗಬಹುದಿಲ್ಲಿ ಕನಸುಗಳ ಗೋಪುರ
ನಾಳೆಗಳ ದಡವದುವು ಕರಗಿ ಹೋಗುವ ಭೀತಿ.
ನಗುವ ಲೋಕದ ಹಿಂದಿದೆ ನೋವಿನಾ ನೆರಳು
ಸಿಡಿದೇಳಬಹುದು ಮನಸಲೊಂದು ಜ್ವಾಲಾಮುಖಿ,
ಉಕ್ಕಿಹರಿಯಬಹುದು ಭಾವನೆಗಳ ಲಾವಾರಸ
ಸುಟ್ಟು ಹೋಗಬಹುದಲ್ಲಿ ಸಂಭಂಧಗಳ ಕೋಟೆ.
ಮನಸೊಂದು ಶಿಲೆಯು ಕೋಪತಾಪಗಳ ಸಮ್ಮಿಲನದಿ
ಒತ್ತಡದಿ ಬಂಧಿಸಿದೆ ಸಂಭಂಧಗಳ ಜೊತೆಗೆ,
ತುಸು ಸಡಿಲವಾದರೂ ಭೂಕಂಪನವಿಲ್ಲಿ
ಬದುಕೇ ಬುಡಮೇಲು ಪ್ರೀತಿಯ ಅಸ್ತಿತ್ವವಿಲ್ಲದೇ.
ಬದುಕ ಪಯಣದಿ ನಾಳೆಯ ದಡ ಕಾಣುವ ತವಕ
ದಾಟಬಲ್ಲೆನೇ ಚಿಂತೆಗಳು ಸುನಾಮಿಯಾಗುವ ಮುನ್ನ,
ಹಿಡಿದಿಡಬಹುದೇ ಕುದಿವ ಲಾವಾರಸವ ಜ್ವಾಲಾಮುಖಿಯಾಗದಂತೆ
ತಡೆಯಬಲ್ಲೆನೇ ಭೂಕಂಪನವ ಪ್ರೀತಿಯ ಬಂಧವ ಬಿಗಿಯಾಗಿಸೀ...
'ತಡೆಯಬಲ್ಲೆನೇ ಭೂಕಂಪನವ ಪ್ರೀತಿಯ ಬಂಧವ ಬಿಗಿಯಾಗಿಸೀ' ಖಂಡಿತ ಸಾದ್ಯವಿದೆ. ಆಶಾಭಾವ ಬೇಕಾಷ್ಟೇ ಜಿಂದಗಿಯಲ್ಲಿ...
ReplyDeletethank u sir..
Delete