ಪರರ ಹಂಗಿಸಬೇಡ ಮೂಢ ಮನವೇ
ನಿನ್ನ ನಾಳೆಯನು ನೀನೇ ಕಾಣದಿರುವಾಗ,
ನಾಳೆಗೂ ಒಬ್ಬ ಒಡೆಯನಿಹುನು ಎಲ್ಲವಾ ತಾನು ನೋಡುತಿರುವ
ಪರರ ನೋಡಿ ನಗುವ ಮೊದಲು ನಿನ್ನ ನಾಳೆಯ ನೆನೆಸಿಕೋ.
ನಿನ್ನ ನಾಳೆಯನು ನೀನೇ ಕಾಣದಿರುವಾಗ,
ನಾಳೆಗೂ ಒಬ್ಬ ಒಡೆಯನಿಹುನು ಎಲ್ಲವಾ ತಾನು ನೋಡುತಿರುವ
ಪರರ ನೋಡಿ ನಗುವ ಮೊದಲು ನಿನ್ನ ನಾಳೆಯ ನೆನೆಸಿಕೋ.
ನೋವು ನಲಿವು ಶಾಶ್ವತವಲ್ಲ ಈ ಇಹದಲ್ಲಿ
ನಿನ್ನೆ ಇಂದು ಮುಗಿದಂತೆಲ್ಲಾ ಬದಲಾಗುವುದೆಲ್ಲಾ,
ಭಿಕ್ಷುಕ ಕೂಡ ಧನಿಕನಾಗುವ ಕಾಲದ ಮಹಿಮೆಯಲ್ಲಿ
ಯಾರೂ ಇಲ್ಲಿ ಕೇವಲರಲ್ಲ ತಿಳಿಯೇ ಮನವೇ ನೀನಿಲ್ಲಿ.
ನಿನ್ನೆ ಇಂದು ಮುಗಿದಂತೆಲ್ಲಾ ಬದಲಾಗುವುದೆಲ್ಲಾ,
ಭಿಕ್ಷುಕ ಕೂಡ ಧನಿಕನಾಗುವ ಕಾಲದ ಮಹಿಮೆಯಲ್ಲಿ
ಯಾರೂ ಇಲ್ಲಿ ಕೇವಲರಲ್ಲ ತಿಳಿಯೇ ಮನವೇ ನೀನಿಲ್ಲಿ.
ಕಷ್ಟಕ್ಕೆ ಸ್ಪಂದಿಸುವ ಮನಸಾಗು ನೀನು
ಯಾರು ತಿಳಿದಿಹರು ನಾಳೆಯಾ ಕಥೆಯಿಲ್ಲಿ,
ಹಣೆಬರಹಕೆ ಇಲ್ಲಿ ಹೊಣೆ ಯಾರು ಇಲ್ಲಾ ಎಂಬುದ ತಿಳಿಬೇಕು ನೀನು
ಬದಲಾವಣೆಯಂತು ಬಂದೇ ಬರುವುದು ಇಂದಲ್ಲ ನಾಳೆಯಲಿ.
ಯಾರು ತಿಳಿದಿಹರು ನಾಳೆಯಾ ಕಥೆಯಿಲ್ಲಿ,
ಹಣೆಬರಹಕೆ ಇಲ್ಲಿ ಹೊಣೆ ಯಾರು ಇಲ್ಲಾ ಎಂಬುದ ತಿಳಿಬೇಕು ನೀನು
ಬದಲಾವಣೆಯಂತು ಬಂದೇ ಬರುವುದು ಇಂದಲ್ಲ ನಾಳೆಯಲಿ.
ಎಲ್ಲವೂ ಇದ್ದು ಕೊರಗುವರು ಇಲ್ಲಿ ನೆಮ್ಮದಿಗಾಗಿ
ಏನೂ ಇಲ್ಲದೆ ಸುಖಿಯಾಗಿರುವ ಲೋಕವು ಇಲ್ಲಿಹುದು,
ಕಾಣುವಾ ದೃಷ್ಟಿಗೆ ಪೊರೆ ಬರಬಹುದು ಓ ಮನಸೇ ಕೇಳು
ಮೇಲು ಕೀಳಿನ ಅಡ್ಡಗೋಡೆಗಳ ಒಡೆಯಬೇಕಷ್ಟೇ.
ಏನೂ ಇಲ್ಲದೆ ಸುಖಿಯಾಗಿರುವ ಲೋಕವು ಇಲ್ಲಿಹುದು,
ಕಾಣುವಾ ದೃಷ್ಟಿಗೆ ಪೊರೆ ಬರಬಹುದು ಓ ಮನಸೇ ಕೇಳು
ಮೇಲು ಕೀಳಿನ ಅಡ್ಡಗೋಡೆಗಳ ಒಡೆಯಬೇಕಷ್ಟೇ.
ಪ್ರೀತಿಗಿಂತ ಮಿಗಿಲಾದ ಭಾವವದು ಇಲ್ಲ ಈ ಜಗದಲ್ಲಿ
ಎಲ್ಲಾ ನಿನ್ನವರೇ ಪ್ರೀತಿಯಾ ಹಂಚು ಸುಖಿಯು ನೀನಿಲ್ಲಿ,
ಹಂಗಿಸ ಹೊರಟರೆ ಈ ಲೋಕವನು ಒಂಟಿಯಾಗಿಯೆ ಬಿಡುವೆ ನೀನಿಲ್ಲಿ
ಸತ್ತಾಗ ಹೊತ್ತೆಯ್ಯೊಲು ಬೇಕು ನಾಲ್ಕು ಜನ ಎಂಬ ಸತ್ಯವ ತಿಳಿ ಮನವೇ...
ಎಲ್ಲಾ ನಿನ್ನವರೇ ಪ್ರೀತಿಯಾ ಹಂಚು ಸುಖಿಯು ನೀನಿಲ್ಲಿ,
ಹಂಗಿಸ ಹೊರಟರೆ ಈ ಲೋಕವನು ಒಂಟಿಯಾಗಿಯೆ ಬಿಡುವೆ ನೀನಿಲ್ಲಿ
ಸತ್ತಾಗ ಹೊತ್ತೆಯ್ಯೊಲು ಬೇಕು ನಾಲ್ಕು ಜನ ಎಂಬ ಸತ್ಯವ ತಿಳಿ ಮನವೇ...
ಮನೋ ಶುದ್ಧೀಕರಣದತ್ತ ನಮ್ಮನು ಹುರಿಗೊಳಿಸುವ ಉತ್ಯಮ ಪ್ರೇರಕ ಕವನ.
ReplyDeletethank u badari sir...
Delete