08 September, 2015

ಸ್ವರ್ಗ ನರಕಗಳ ನಡುವೆ....


ನದಿಯ ಮೂಲ ಋಷಿಯ ಮೂಲ
ಹುಡುಕ ಹೊರಟಿಹ ಮನುಜನೂ,
ಧರ್ಮದ ಮೂಲ ಹುಡುಕೋ ಭರದಲಿ
ಮರೆತ ತನ್ನತನವನೂ.

ಮೇಲೆ ಸ್ವರ್ಗ ಕೆಳಗೆ ನರಕವೆನ್ನುತ
ಹಾದಿ ಹಿಡಿದ ಹುಡುಕುತಾ,
ಸ್ವರ್ಗವದುವು ಮರೀಚಿಕೆಯಾಯಿತು
ನರಕವಿನ್ನು ಹತ್ತಿರವಾಯಿತು ತನ್ನ ಇಹದಲೇ.

ತನ್ನೊಳಗೆ ಇರುವ ದೈವತ್ವವ ಮರೆತ
ಸ್ವರ್ಗವನ್ನು ಕಾಣದಾದ ಹಗಲು ಇರುಳಿನಲೂ,
ಮನುಜತೆಯ ಮರೆತ ಮನುಜಗೇ
ದರ್ಶನವಾದರು ನರಕವಿಲ್ಲಿ ಗುರುತಿಸದಾದನು.

ನಂಬಿಕೆ ಮರೆತ ಮನುಜ ಮುಳುಗಿದ ಅಂಧಕಾರದಲಿ
ಜೊತೆಗೆ ಇರುವ ಜೀವಗಳ ಮರೆತ,
ಅಹಂಕಾರದಿ ಹೆಜ್ಜೆ ಹೆಜ್ಜೆಗೂ ಕಂಡ ನರಕವನೇ
ಭುವಿಯಲೇ ನರಕ ಸೃಷ್ಟಿಸಿ ಮೆರೆದಾ ಮನುಜನಿಲ್ಲಿ.

ಭುವಿಯೇ ಸ್ವರ್ಗ ಮನುಜಗಿಲ್ಲಿ
ಸೃಷ್ಟಿಯ ಅರಿತು ನಡೆವರೆಗೂ,
ತಾನು ತನ್ನದು ಎಂದು ನಡೆದರೆ ಭುವಿಯೇ ನರಕ 
ಅನ್ನುವ ಲೋಕ ಸತ್ಯವ ತಾ ಮರೆತ.


No comments:

Post a Comment