15 March, 2016

ಧರ್ಮ....


ಸ್ವರ್ಗ ನರಕ ಮೇಲೆ ಕೆಳಗೆಲ್ಲೂ ಇಲ್ಲ
ಪಾಪ ಪುಣ್ಯ ಪುಸ್ತಕದೊಳಗೆ ಅಲ್ಲ,
ನೀ  ನಡೆಯೋ ದಾರಿಲಿ ಧರ್ಮವಾ ಮರಿಬೇಡ
ಪಾಪವೋ ಪುಣ್ಯವೋ ಕರ್ಮವು ನಡಿಬೇಕು.

ಪಾಪ ಬೆನ್ನು ಬಿಡೋದಿಲ್ಲ ನೀ  ಸಾಗೋ ದಾರಿಲಿ
ಕರ್ಮವೂ ಕೈಗೂಡೊದಿಲ್ಲ ಪುಣ್ಯವಾ ಮರೆತಲ್ಲಿ,
ತಾನೆಂದು ಮೆರೆಯೋದು ಮನುಜತೆಗೆ ಹಿತವಲ್ಲ
ಕಲಿಬೇಕು ನೀನಿಲ್ಲಿ ಬದುಕಿನಾ ಮರ್ಮವನು.

ಉಸಿರಿಲ್ಲಿ ನಿನದಲ್ಲಾ ನೀನದಕೆ ಒಡೆಯನೂ ಅಲ್ಲ
ಬಂದಾಗ ತಂದಿದ್ರೂ ಹೋಗೋವಾಗ ಒಯ್ಯೊದಿಲ್ಲ,
ಕರ್ಮಫಲವೇ ರಕ್ಷಣೆಯು ಈ ಭುವಿಯಾ ಮೇಲೀಗ
ಮರೆತಾಗ ಮರ್ಕಟ ನೀನೆಂದು ಇಳೆಯಲ್ಲಿ.

ಪ್ರೀತಿನೇ ಆಧಾರ ನಿನ್ನ ಇರುವಿಗೆ ಇಲ್ಲೆಲ್ಲಾ
ದ್ವೇಷಾನೇ ಅಪರಾಧ ನೀ ಬಾಳೋ ಬದುಕಲ್ಲಿ,
ಜ್ಞಾನಾನೇ ಬೆಳಕಿಲ್ಲಿ ನೀ ಸಾಗೋ ದಾರಿಗೆ
ಅಜ್ಞಾನದ ಕತ್ತಲೇಲಿ ನಿನ್ನಾ  ನೀ  ಕಳಿಬೇಡ.

ಗೋಡೆಗಳ ಒಡೆದುಬಿಡು ಈ ಜಗವೆಲ್ಲಾ ಸುಂದರ
ಕಣ್ಣುಗಳ ತೊಳೆದುಬಿಡು ಈ ಸಂಸಾರ ನಿನದೆಲ್ಲಾ,
ನಿನಗೊಂದು ಧರ್ಮವಿದೆ ನಡೆಯಿಲ್ಲಿ ನೀ ಮುಂದೆ
ಪುಣ್ಯದಾ ಹಾದಿಲಿ ನೀ ಸಾರೋ ಮನುಜ ಮತ.

No comments:

Post a Comment