ಪ್ರಕೃತಿಯ ವರಪುತ್ರ
ಉಳುವ ನೇಗಿಲ ಯೋಗಿ
ನೀ ಜಗದ ದೈವ ಕಣೋ.
ಮಳೆಯೊಡನೆ ಜೂಟಾಟವಾಡುತ್ತಾ
ದಣಿವರಿಯದ ಧಣಿ ನೀನು
ಈ ಜಗದ ಉಸಿರು ಕಣೋ.
ನೆತ್ತರನೇ ಬಸಿದು ಬೆವರನ್ನು ಸುರಿಸಿ
ಸೂರ್ಯನನ್ನೇ ದಿಟ್ಟಿಸಿ ನೋಡುವ ನೀನು
ಈ ಜಗಕೆ ಕಣ್ಣು ಕಣೋ.
ಬೆನ್ನಿಗಂಟಿದ ಹೊಟ್ಟೆಯಾ ಹಿಡಿದು
ಮನ್ವಂತರಗಳನ್ನೆದುರಿಸುತ್ತಿರುವ ನೀನು
ಈ ಜಗದ ಬೆಳಕೂ ಕಣೋ.
ಮಣ್ಣಿಂದ ತೆಗೆವೆ ಹೊನ್ನಂಥ ಬೆಳೆಯಾ
ಜಗದ ಹಸಿವ ತಣಿಸೋ ನೀನು
ಈ ಸೃಷ್ಟಿಯ ಜಾದುಗಾರ ಕಣೋ.
ಪ್ರತಿ ಕಾಳಿನಲ್ಲೂ ತುಂಬಿದೆ ಧನ್ಯತೆಯ ಭಾವ
ಪ್ರಕೃತಿ ಹಿತ ಕಾಯೋ ವೀರ
ನೀನೊಬ್ಬ ನಿಜ ಯೋಧ ಕಣೋ.
No comments:
Post a Comment