ತುಸು ದೂರ ನಿಂತರೂ
ಅನುಮಾನವೇತಕೆ,
ಜೊತೆಯಲ್ಲೇ ಇದ್ದರೂ
ಈ ಮೌನವೇತಕೆ...
ಪ್ರೀತಿಯ ಬಲೆಯಲಿ
ನಾನೀಗ ಒಂಟಿಯೂ,
ನೀ ಮೌನ ಮುರಿದರೆ
ನಾವಿಲ್ಲಿ ಜಂಟಿಯೂ...
ನಗುವಿರದ ಕನಸಿಗೆ
ಕದ ಹೇಗೆ ತೆರೆಯಲಿ,
ನೆನಪಿನಾ ಅಲೆಯಲಿ
ನಾ ಹೇಗೆ ಬೆರೆಯಲಿ...
ಆಸೆ ಇರದ ಬದುಕಲಿ
ಅವಕಾಶ ಕೈ ಚೆಲ್ಲಿದೆ,
ನೀನೊಮ್ಮೆ ನಕ್ಕರೂ
ನೂರು ಮಿಂಚಿನಾ ಪುಳಕವೂ...
ನಾವಲ್ಲ ಇಬ್ಬರೂ
ಈ ಬದುಕಿನಾ ಪಯಣದಿ,
ಹೆಸರಷ್ಟೇ ಎರಡದು
ಉಸಿರಿಲ್ಲಿ ಅತಂತ್ರವೂ...
ಸೋತರೆ ಒಬ್ಬರೂ
ಶೋಕವದು ಮನಸಿಗೆ,
ಪ್ರೀತಿಯಿಲ್ಲಿ ಕೊನೆಯಾದರೇ
ಬದುಕಿಗಿಲ್ಲಿ ಕೊನೆಯಿರದಾ ಸೂತಕ....
ಅನುಮಾನವೇತಕೆ,
ಜೊತೆಯಲ್ಲೇ ಇದ್ದರೂ
ಈ ಮೌನವೇತಕೆ...
ಪ್ರೀತಿಯ ಬಲೆಯಲಿ
ನಾನೀಗ ಒಂಟಿಯೂ,
ನೀ ಮೌನ ಮುರಿದರೆ
ನಾವಿಲ್ಲಿ ಜಂಟಿಯೂ...
ನಗುವಿರದ ಕನಸಿಗೆ
ಕದ ಹೇಗೆ ತೆರೆಯಲಿ,
ನೆನಪಿನಾ ಅಲೆಯಲಿ
ನಾ ಹೇಗೆ ಬೆರೆಯಲಿ...
ಆಸೆ ಇರದ ಬದುಕಲಿ
ಅವಕಾಶ ಕೈ ಚೆಲ್ಲಿದೆ,
ನೀನೊಮ್ಮೆ ನಕ್ಕರೂ
ನೂರು ಮಿಂಚಿನಾ ಪುಳಕವೂ...
ನಾವಲ್ಲ ಇಬ್ಬರೂ
ಈ ಬದುಕಿನಾ ಪಯಣದಿ,
ಹೆಸರಷ್ಟೇ ಎರಡದು
ಉಸಿರಿಲ್ಲಿ ಅತಂತ್ರವೂ...
ಸೋತರೆ ಒಬ್ಬರೂ
ಶೋಕವದು ಮನಸಿಗೆ,
ಪ್ರೀತಿಯಿಲ್ಲಿ ಕೊನೆಯಾದರೇ
ಬದುಕಿಗಿಲ್ಲಿ ಕೊನೆಯಿರದಾ ಸೂತಕ....
No comments:
Post a Comment