ಒಲವೆಂಬ ಕಡಲೊಳಗೆ ಬದುಕೆಂಬ ದೋಣಿಯೊಳು
ದಾರಿ ತಿಳಿಯದ ನಾವಿಕನು ನಾನು,
ಹೆಚ್ಚೇನು ತಿಳಿದಿಲ್ಲ ಹುಚ್ಚು ಆಸೆಗಳಷ್ಟೇ ಇವೆಯಿಲ್ಲಿ
ತೀರ ಸೇರಬಹುದೇ ಓ ಮನಸೇ...
ನಗುವೆಂಬ ಮುಖವಾಡ ಜೊತೆಗೆಯಿದೆಯಷ್ಟೇ
ನೂರು ನೋವುಗಳ ಪಯಣದೊಳಗೆ,
ಮೌನಕೊಪ್ಪಿದ ಭಾಷೆ ತನ್ನದಾಗಿರಲು
ನನ್ನವರು ಎಲ್ಲರೂ ಎಂಬುದು ಮರೀಚಿಕೆಯಷ್ಟೇ...
ರಾಗ ದ್ವೇಷಗಳ ಅಲೆಗಳು ದೂಡುತಿವೆ ಮುಂದೆ
ದಡ ಸೇರುವ ಚಿಂತೆಯಲಿ ಮನಸು ಮೌನ,
ಬದುಕೆಂಬ ದೋಣಿಯಿಲ್ಲಿ ಚಲಿಸುತಿದೆ ಮುಂದೆ
ಮುಳುಗೀತೆಂಬ ಭೀತಿಯಲ್ಲಿ ನಿತ್ಯ ಸತ್ಯ...
ಆಗಾಗ ಬೀಸುತಿದೆ ತಿಳಿಯಾದ ಓಲವ ತಂಗಾಳಿ
ಅನುಮಾನ ಅವಮಾನಗಳ ಬೇಗೆ ಕಳೆಯುವಂತೆ,
ಕಷ್ಟಗಳ ಕಾರ್ಮೊಡ ನೆರೆದಿದೆ ತಲೆ ಮೇಲೆ
ಹೊತ್ತುತರಬಹುದೇ ನೋವುಗಳ ಚಂಡಮಾರುತ...
ಭೋರ್ಗರೆಯುವ ಜಲಧಿಯಲಿ ಒಂಟಿ ಪಯಣ
ಬೆಳಕ ಕಂಡಾಗಲೆಲ್ಲಾ ನಾಳೆಗಳ ದಡವ ಸೇರುವ ಬಯಕೆ,
ಸೇರಬಹುದೇ ನಲಿವೆಂಬ ದಂಡೆಯನ್ನೂ
ಪಡೆಯಬಹುದೇ ಪ್ರೀತಿ ಸ್ನೇಹಗಳ ಮುತ್ತು ರತ್ನ...
ದಾರಿ ತಿಳಿಯದ ನಾವಿಕನು ನಾನು,
ಹೆಚ್ಚೇನು ತಿಳಿದಿಲ್ಲ ಹುಚ್ಚು ಆಸೆಗಳಷ್ಟೇ ಇವೆಯಿಲ್ಲಿ
ತೀರ ಸೇರಬಹುದೇ ಓ ಮನಸೇ...
ನಗುವೆಂಬ ಮುಖವಾಡ ಜೊತೆಗೆಯಿದೆಯಷ್ಟೇ
ನೂರು ನೋವುಗಳ ಪಯಣದೊಳಗೆ,
ಮೌನಕೊಪ್ಪಿದ ಭಾಷೆ ತನ್ನದಾಗಿರಲು
ನನ್ನವರು ಎಲ್ಲರೂ ಎಂಬುದು ಮರೀಚಿಕೆಯಷ್ಟೇ...
ರಾಗ ದ್ವೇಷಗಳ ಅಲೆಗಳು ದೂಡುತಿವೆ ಮುಂದೆ
ದಡ ಸೇರುವ ಚಿಂತೆಯಲಿ ಮನಸು ಮೌನ,
ಬದುಕೆಂಬ ದೋಣಿಯಿಲ್ಲಿ ಚಲಿಸುತಿದೆ ಮುಂದೆ
ಮುಳುಗೀತೆಂಬ ಭೀತಿಯಲ್ಲಿ ನಿತ್ಯ ಸತ್ಯ...
ಆಗಾಗ ಬೀಸುತಿದೆ ತಿಳಿಯಾದ ಓಲವ ತಂಗಾಳಿ
ಅನುಮಾನ ಅವಮಾನಗಳ ಬೇಗೆ ಕಳೆಯುವಂತೆ,
ಕಷ್ಟಗಳ ಕಾರ್ಮೊಡ ನೆರೆದಿದೆ ತಲೆ ಮೇಲೆ
ಹೊತ್ತುತರಬಹುದೇ ನೋವುಗಳ ಚಂಡಮಾರುತ...
ಭೋರ್ಗರೆಯುವ ಜಲಧಿಯಲಿ ಒಂಟಿ ಪಯಣ
ಬೆಳಕ ಕಂಡಾಗಲೆಲ್ಲಾ ನಾಳೆಗಳ ದಡವ ಸೇರುವ ಬಯಕೆ,
ಸೇರಬಹುದೇ ನಲಿವೆಂಬ ದಂಡೆಯನ್ನೂ
ಪಡೆಯಬಹುದೇ ಪ್ರೀತಿ ಸ್ನೇಹಗಳ ಮುತ್ತು ರತ್ನ...
No comments:
Post a Comment