17 June, 2017

ಕನಸಿನ ಚಿತ್ತಾರ...

ಅರಳುವ ಹೂವುಗಳು
ಉದಯಿಸೋ ನಾಳೆಗಳು,
ಮೂಡುವ ಕನಸುಗಳು
ನಾಳೆಯ ದಾರಿ ದೀಪಗಳು...

ಚದುರಿವೆ ಮೋಡಗಳು
ಮನಸಿನ ಆಗಸದೀ,
ಭಾವದ ತರಂಗಗಳು
ಬಿಡಿಸಿವೆಯಲ್ಲಿ ಬಣ್ಣಗಳ ಚಿತ್ತಾರ...

ಇಲ್ಲಿ ನೋವಿನ ಹಂಗಿಲ್ಲಾ
ಇದು ಬರೀಯ ನಲಿವಿನ ಚಿತ್ತಾರ,
ಮೂಡುವ ನೆನಪುಗಳು
ಇಲ್ಲಿ ದಿನ ಬೆಳಗೋ ನೇಸರ...

ನೆನಪುಗಳ ಜಾತ್ರೆಯಿದು
ನೆಪವಿಲ್ಲಿ ಬೇಕಿಲ್ಲಾ,
ಮರೆವಿನ ಮರೆಯಲ್ಲಿ
ಮನಸಿಂದು ಮಂದಾರ...

ಅರಳುತಿರಲು ಹೂವುಗಳು
ನಾಳೆಗಳೆಲ್ಲಾ ಕಂಪಾಗಿಹುದಿಲ್ಲಿ,
ಖುಷಿಯಾ ಜೊತೆಯಲ್ಲಿ
ಬಾಳೆಲ್ಲಾ ತಂಪಾಗಿಹುದಿಲ್ಲಿ...






No comments:

Post a Comment