12 June, 2017

ಓ ಮನಸೇ...

ಅರಿಯೋ ಮನಸಿಗೆ
ಬೆರೆಯೋ ಗುಣವಿರಬೇಕು,
ಪ್ರೀತಿಸೋ ಮನಸಿಗೆ
ಮರೆಯೋ ಗುಣವಿರಬೇಕು...

ಖುಷಿಯ ಹುಡುಕೋ ಮನಸಿಗೆ
ದುಃಖಗಳ ಕಳೆಯೋ ಭಾವವಿರಬೇಕು,
ಸ್ನೇಹವ ಬಯಸೋ ಮನಸಿಗೆ
ಮನ್ನಿಸೋ ಭಾವ ಜೊತೆಯಿರಬೇಕು...

ಬೆಳದಿಂಗಳ ಹುಡುಕೋ ಮನಸಿಗೆ
ಚಂದಿರನಾಗೊ ಛಲವಿರಬೇಕು,
ಆಸೆಗೋಪುರ ಕಟ್ಟೋ ಮನಸಿಗೆ
ಕನಸು ಕಾಣುವ ಒಲವಿರಬೇಕು...

ಭಾವನೆಗಳ ಜಾತ್ರೆಯಲಿ
ಮಗುವಂತೆ ನಲಿಬೇಕು,
ಜೀವನದ ಲೆಕ್ಕಾಚಾರ
ಚೆನ್ನಾಗಿ ಅರಿತಿರಬೇಕು...

ಸಂತೋಷ ಪಡೆಯೋಕೆ
ನೋವುಗಳ ಭಾಗಿಸಬೇಕು,
ಮನುಜತೆಯ ಮೆರೆಸೋಕೆ
ಮನಸಿಗೆ ತ್ಯಾಗದ ಗುಣವಿರಬೇಕು...



No comments:

Post a Comment