ತಂಪಾದ ಬದುಕಿಲ್ಲಿ ಕೆಂಪಾಗೋ ಮುನ್ನ
ಹುಡುಕಬೇಕಿಲ್ಲಿ ಸಾರ್ಥಕತೆಯ ನೆಲೆಯಾ,
ಹಣ್ಣು ಎಲೆಯದುವು ಉದುರಿ ಹೋಗೊ ಮುನ್ನ
ಸಾರ್ಥಕ್ಯಗೊಳಿಸಿದಂತೆ ತನ್ನಿರುವನ್ನ...
ಆರಂಭವದು ಅಂತ್ಯವಾಗುವ ಮೊದಲು
ಸಂಪಾದಿಸಬೇಕಿದೆ ಸ್ವಲ್ಪ ಪುಣ್ಯವನ್ನ,
ಭಯದಿಂದಲ್ಲ ಭಕ್ತಿಯಿಂದಲ್ಲ
ಹುಟ್ಟಿದ್ದು ಮನುಜನಾಗಿ ಎಂಬ ಕಾರಣದಿ...
ದ್ವೇಷವೆಂಬ ಕಿಡಿ ಬೆಂಕಿಯಾಗುವ ಮುನ್ನ
ಹಚ್ಚಬೇಕಿದೆ ಪ್ರೀತಿಯೆಂಬ ದೀಪ,
ಆರಂಭವು ಅಂತ್ಯದೊಳು ಮರೆಯಾಗುವ ಮೊದಲು
ಬೆಳಕಾಗಬೇಕು ಜಗದ ಕತ್ತಲೆಗೆ...
ಆರಂಭಕ್ಕೊಂದು ಅಂತ್ಯವಿದೆ ಎಂಬುವುದಿಲ್ಲಿ ಸತ್ಯ
ಅಂತ್ಯವಿದು ಹೊಸ ಆರಂಭವಿಲ್ಲಿ ನಿತ್ಯ ಸತ್ಯ,
ಬದಲಾವಣೆ ಇದು ಜಗದ ನಿಯಮ
ಬದಲಾಗಬೇಕಿದೆ ಮನಸೇ ನಿನ್ನ ಬದುಕ ನಿಯಮವಿಲ್ಲಿ ಈಗ...
ಹುಡುಕಬೇಕಿಲ್ಲಿ ಸಾರ್ಥಕತೆಯ ನೆಲೆಯಾ,
ಹಣ್ಣು ಎಲೆಯದುವು ಉದುರಿ ಹೋಗೊ ಮುನ್ನ
ಸಾರ್ಥಕ್ಯಗೊಳಿಸಿದಂತೆ ತನ್ನಿರುವನ್ನ...
ಆರಂಭವದು ಅಂತ್ಯವಾಗುವ ಮೊದಲು
ಸಂಪಾದಿಸಬೇಕಿದೆ ಸ್ವಲ್ಪ ಪುಣ್ಯವನ್ನ,
ಭಯದಿಂದಲ್ಲ ಭಕ್ತಿಯಿಂದಲ್ಲ
ಹುಟ್ಟಿದ್ದು ಮನುಜನಾಗಿ ಎಂಬ ಕಾರಣದಿ...
ದ್ವೇಷವೆಂಬ ಕಿಡಿ ಬೆಂಕಿಯಾಗುವ ಮುನ್ನ
ಹಚ್ಚಬೇಕಿದೆ ಪ್ರೀತಿಯೆಂಬ ದೀಪ,
ಆರಂಭವು ಅಂತ್ಯದೊಳು ಮರೆಯಾಗುವ ಮೊದಲು
ಬೆಳಕಾಗಬೇಕು ಜಗದ ಕತ್ತಲೆಗೆ...
ಆರಂಭಕ್ಕೊಂದು ಅಂತ್ಯವಿದೆ ಎಂಬುವುದಿಲ್ಲಿ ಸತ್ಯ
ಅಂತ್ಯವಿದು ಹೊಸ ಆರಂಭವಿಲ್ಲಿ ನಿತ್ಯ ಸತ್ಯ,
ಬದಲಾವಣೆ ಇದು ಜಗದ ನಿಯಮ
ಬದಲಾಗಬೇಕಿದೆ ಮನಸೇ ನಿನ್ನ ಬದುಕ ನಿಯಮವಿಲ್ಲಿ ಈಗ...
No comments:
Post a Comment