31 October, 2017

ಧಣಿ ನೀನು ದನಿಯಾಗು...

ಜನ ಮಾನಸದ ದನಿಯಾಗಬೇಕು
ಪ್ರೀತಿಯಲಿ ಎಂದೂ ಧಣಿಯಾಗಬೇಕು,
ಗುಣದಲ್ಲಿ ಅಪ್ಪಟ ಚಿನ್ನದ ಗಣಿಯಾಗಬೇಕು
ಓ ಗೆಳೆಯಾ ನೀನೆಂದೂ ಸ್ನೇಹಕ್ಕೆ ಋಣಿಯಾಗಿರಬೇಕು...

ಹೆತ್ತ ತಾಯಿಗೆ ಮುದ್ದಿನ ಮಗನಾಗಬೇಕು
ಹೊತ್ತ ತಾಯಿಯ ಚೊಚ್ಚಲ ಮಗನಂತಿರಬೇಕು,
ನಾಡು ನುಡಿಗೆ ನೀ ಕಾವಲಾಗಬೇಕು
ಓ ಗೆಳೆಯಾ ನೀನು ತಾಯಿನಾಡಿನ ಸೇವಕನಾಗಿರಬೇಕು...

ಸಂಸ್ಕೃತಿಯಾ ಪ್ರತಿಬಿಂಬದಂತಿರಬೇಕು
ಸಂಸ್ಕಾರಕೆ ನೀನು ಗುರುವಾಗಬೇಕು,
ಧರ್ಮ ರಕ್ಷಣೆಗೆ ನೀನು ದಂಡನಾಯಕಬೇಕು
ಓ ಗೆಳೆಯ ನೀನು ನ್ಯಾಯ ನೀತಿಗೆ ನಾಯಕನಾಗಬೇಕು...

ಗಿರಿ ಶಿಖರವಾಗು ಕಷ್ಟಗಳ ಜೊತೆಗೆ
ಗುರಿಯಿರಲಿ ಮನುಜತೆಯ ಕಡೆಗೆ,
ಹುಲ್ಲಾಗು ನೋವಿನ ಹೃದಯಗಳಿಗೆ
ಓ ಗೆಳೆಯಾ ನೀನಾಗು ದೀನ ಬಂಧು...













No comments:

Post a Comment