20 November, 2017

ಭಾವಯಾನ...

ಪ್ರೀತಿ ನೀನು ಸನಿಹ ಬರುವವರೆಗೂ
ಬಾನ ಚಂದಿರ,
ಬದುಕ ಜೊತೆಗೆ ಸೇರಿದೊಡನೆ
ಮನಸು ಮೌನ ಮಂದಿರ...

ತುಸು ಕೋಪವಿಲ್ಲಿ,ಹುಸಿ ಮುನಿಸ ಜೊತೆಗೆ
ಬಾಳು ನಂದನ,
ಹಿತವಾದ ಮಾತು ತುಟಿಯಂಚ ನಗುವು ಕರಗೇ
ಬದುಕೇ ಕಾನನ...

ಸ್ನೇಹದ ಜೊತೆಗೆ ಪ್ರೇಮವ ಬೆರೆವ ಪರಿಗೆ
ಬದುಕಿಲ್ಲಿ ವಿಸ್ಮಯಾ,
ನಗುವಿನ ಲೋಕದೆ ನೋವನು ಮರೆಸುವ
ಭಾವವೇ ನೀನಿಲ್ಲಿ ಪುರಸ್ಕೃತ...

ಬದುಕಲಿ ಭಾವದ ಬವಣೆಯ ಹೆಣೆಯೋ
ಪ್ರೀತಿಯೇ ನೀನೊಬ್ಬ ಪರೀಕ್ಷಕ,
ಪ್ರೀತಿ ಪರೀಕ್ಷೆಯ ಪದೇ ಪದೇ ಪಡೆಯುವ
ಬದುಕೇ ನೀನಿಲ್ಲಿ ಪರೀಕ್ಷಿತ...




No comments:

Post a Comment