ಎದೆಯ ತುಂಬೆಲ್ಲಾ ನೆನಪುಗಳ ಹಾವಳಿ
ಮನಸಿನಾ ತುಂಬಾ ಕನಸುಗಳಾ ಹಾವಳಿ,
ರಜೆ ಹಾಕಿದ ಕನಸುಗಳು ಮತ್ತೆ ಹಾಕಿವೆ ಹಾಜರಿ...
ಬದುಕಿನಾ ಪುಟದೊಳಗೆ ಭಾವನೆಗಳ ಹಾಜರಿ
ಬರೆದಿದೆ ಮನಸೊಳಗೆ ನಲಿವಿನಾ ಚಿತ್ತಾರ,
ಚಿಂತೆಯೆಂಬ ಚಿತೆಯಿಲ್ಲಿ ಹಾಕಿದೆ ಗೈರು ಹಾಜರಿ...
ಮರಳಿದೆ ಮಂದಹಾಸ ಮನಸಿನಾ ಅಂಗಳಕೆ
ನಗುವಿನಾ ಪಯಣ ಈಗ ಬದುಕಿನಾ ನಂದನದೀ,
ಬದುಕೀಗ ತುಂಟಾಟ ತುಟಿಯಂಚಿನ ನಗುವಲ್ಲೇ...
ಕನಸುಗಳಿಗೆ ಶುರುವೀಗ ವಸಂತ ಕಾಲ
ನೋವು ನಲಿವುಗಳು ನೆಪವಷ್ಟೆ ನೆನಪೀಗೆ,
ಕನಸುಗಳ ಜೊತೆಯಿರಲು ಬದುಕಿಲ್ಲಿ ಚೈತ್ರ ಕಾಲ...
ಮನಸಿನಾ ತುಂಬಾ ಕನಸುಗಳಾ ಹಾವಳಿ,
ರಜೆ ಹಾಕಿದ ಕನಸುಗಳು ಮತ್ತೆ ಹಾಕಿವೆ ಹಾಜರಿ...
ಬದುಕಿನಾ ಪುಟದೊಳಗೆ ಭಾವನೆಗಳ ಹಾಜರಿ
ಬರೆದಿದೆ ಮನಸೊಳಗೆ ನಲಿವಿನಾ ಚಿತ್ತಾರ,
ಚಿಂತೆಯೆಂಬ ಚಿತೆಯಿಲ್ಲಿ ಹಾಕಿದೆ ಗೈರು ಹಾಜರಿ...
ಮರಳಿದೆ ಮಂದಹಾಸ ಮನಸಿನಾ ಅಂಗಳಕೆ
ನಗುವಿನಾ ಪಯಣ ಈಗ ಬದುಕಿನಾ ನಂದನದೀ,
ಬದುಕೀಗ ತುಂಟಾಟ ತುಟಿಯಂಚಿನ ನಗುವಲ್ಲೇ...
ಕನಸುಗಳಿಗೆ ಶುರುವೀಗ ವಸಂತ ಕಾಲ
ನೋವು ನಲಿವುಗಳು ನೆಪವಷ್ಟೆ ನೆನಪೀಗೆ,
ಕನಸುಗಳ ಜೊತೆಯಿರಲು ಬದುಕಿಲ್ಲಿ ಚೈತ್ರ ಕಾಲ...
No comments:
Post a Comment