ಮೂರು ದಿನದ ಬದುಕೂ
ಇಲ್ಲಿ ನೂರು ಖುಷಿಯ ತವಕ,
ಕಣ್ಣರೆಪ್ಪೆ ಮುಚ್ಚಿ ತೆರೆಯೋ ಮುಂಚೆ
ಕನಸ ಮುಗಿಸೋ ತವಕ...
ಜಗದ ಕತ್ತಲು ಕಳೆಯೋ ಮುಂಚೆ
ಬೆಳಕ ಕಾಣೋ ತವಕ,
ಮಿಂಚು ಹುಳದ ಬೆಳಕಿನಲ್ಲೂ
ಲೋಕ ಸುತ್ತುವ ತವಕ...
ಒಂಟಿ ಪಯಣದಲ್ಲೂ
ಜಂಟಿ ಕನಸ ಕಾಣೋ ತವಕ,
ಕತ್ತಲು ಕವಿದ ಬದುಕಿನಲ್ಲೂ
ಬೆಳದಿಂಗಳ ಹುಡುಕೋ ತವಕ...
ಸೂರ್ಯ ಕಿರಣದೊಳಗೂ
ಚಂದ್ರ ಬಿಂಬ ಕಾಣೋ ತವಕ,
ಭಾವ ಮುದುಡಿದ ಮನಸಿನಲ್ಲೂ
ಪ್ರೀತಿ ಬೆಳೆಸೋ ತವಕ...
ಇಲ್ಲಿ ನೂರು ಖುಷಿಯ ತವಕ,
ಕಣ್ಣರೆಪ್ಪೆ ಮುಚ್ಚಿ ತೆರೆಯೋ ಮುಂಚೆ
ಕನಸ ಮುಗಿಸೋ ತವಕ...
ಜಗದ ಕತ್ತಲು ಕಳೆಯೋ ಮುಂಚೆ
ಬೆಳಕ ಕಾಣೋ ತವಕ,
ಮಿಂಚು ಹುಳದ ಬೆಳಕಿನಲ್ಲೂ
ಲೋಕ ಸುತ್ತುವ ತವಕ...
ಒಂಟಿ ಪಯಣದಲ್ಲೂ
ಜಂಟಿ ಕನಸ ಕಾಣೋ ತವಕ,
ಕತ್ತಲು ಕವಿದ ಬದುಕಿನಲ್ಲೂ
ಬೆಳದಿಂಗಳ ಹುಡುಕೋ ತವಕ...
ಸೂರ್ಯ ಕಿರಣದೊಳಗೂ
ಚಂದ್ರ ಬಿಂಬ ಕಾಣೋ ತವಕ,
ಭಾವ ಮುದುಡಿದ ಮನಸಿನಲ್ಲೂ
ಪ್ರೀತಿ ಬೆಳೆಸೋ ತವಕ...
No comments:
Post a Comment