21 April, 2019

ಹೋರಾಟ...

ಹುಟ್ಟು ಒಂದು ಹೋರಾಟ
ಸಾವು ಬಂದು ಎದುರು ನಿಲ್ಲೋವರೆಗೂ,
ಜೀವನ ಒಂದು ಬಡಿದಾಟ
ಪ್ರೀತಿ ನಿನ್ನ ಹುಡುಕಾಟದೊಳಗೆಲ್ಲಾ...

ಜೀವನ ಒಂದು ಹುಡುಕಾಟ
ಸ್ನೇಹವೆಂಬ ಆಸರೆ ಸಿಗೋವರೆಗೂ,
ಕಳೆದುಕೊಳ್ಳೋ ಭೀತಿಯೊಳಗೆ
ಸಿಕ್ಕಿದ್ದೆಲ್ಲಾ ನನ್ನದೇ ಅನ್ನೊ ಅಹಂಕಾರ...

ಯಾರಿಗಿಲ್ಲಿ ಯಾರು ಇಲ್ಲಾ
ನಮ್ಮವರನ್ನೋರು ಜೊತೆಲಿ ಇದ್ರುನೂ ಕೂಡ,
ಜೀವನ ಇಲ್ಲಿ ಖಾಲಿ ಪಾತ್ರೆ
ನಂಬಿಕೆನೇ ಮರೆತು ಹೋದ ಮೇಲೆಲ್ಲಾ...

ಸಾವು ಬಂದು ಎದುರು ನಿಂತು ಕೇಳಿದಾಗ
ಉತ್ತರ ಕೊಡಲೇಬೇಕಲ್ಲಾ,
ಪ್ರೀತಿಯೇಯಿರಲಿ ಸ್ನೇಹವೇ ಇರಲಿ
ಬದುಕಿಗೊಂದಷ್ಟು ನಂಬಿಕೇನೂ ಇರಲೇಬೇಕಲ್ಲಾ... 

No comments:

Post a Comment