27 April, 2019

ಮಾಯೆ...

 ನೀನೇ ಬರಿ ನೀನೇ
ಕಣ್ಣಿಗೆ ಕಾಣದ ಖಾಲಿತನ ನೀನೇ,
ನಂಬಿಕೆಗೆ ನೀನೇ ದೈವದಂತೆ
ಬಂಧುವು ನೀನೇ ತಂದೆ ತಾಯಿಯಂತೆ...

ಹಂಬಲಿಸಿದೆ ನಾನು ನೋಡಲು ಒಮ್ಮೆ
ಹುಡುಕಲೇ ಇಲ್ಲಾ ನನ್ನೊಳಗೊಮ್ಮೆ,
ಮರೆಸಿದೆ ನೀನು ನೋವಿನ ಭಾವ
ಕಾಣಲೇ ಇಲ್ಲಾ ಆದರೂ ನಿನ್ನಾ...

ನೀನೆಂದೂ ಕೈಗೆಟುಕದ ಆಕಾಶ
ನನ್ನೊಳಗೆ ನೀನು ಮತ್ತೊಂದು ಅವಕಾಶ,
ನಿನ್ನಾ ನಂಬಿಕೆಯೇ ನನಗಿಲ್ಲಿ ಔಷಧಿಯೂ
ನನ್ನೊಳಗೆ ನೀನೊಂದು ಪ್ರಪಂಚವೂ...

ದಾರಿ ತೋರಿ ಮುನ್ನಡೆಸೋ ಶಕ್ತಿಯೂ ನೀನು
ನನ್ನ ಪ್ರಾರ್ಥನೆಯೊಳಗೆ ಭಕ್ತಿಯೂ ನೀ,
ಜಗ ನಡೆಸೋ ಶಕ್ತಿಯೂ ನೀನು
ದೇವರೆನ್ನದೆ ನಿನ್ನ ಸಖನೆನ್ನಲೇ...

No comments:

Post a Comment