ಯಾವ ಜನ್ಮದ ಶಾಪವೋ
ಯಾರು ಮಾಡಿದ ಪಾಪವೋ,
ನಾಲ್ಕು ದಿನಕೆ ನೀನು ಬಂದೆ ಬಾಳಿಗೆ
ಹೊರಟು ಹೋದೆ ಮತ್ತೆ ಬಾರದ ನಿನ್ನೂರಿಗೆ...
ವಿಧಿಯ ಯಾವ ಕಳ್ಳಾಟವೋ
ನಿನ್ನ ಇಲ್ಲಿ ನರಳಾಡಿಸಿತೋ,
ಯಾವ ಕಣ್ಗಳ ಕ್ರೂರ ದೃಷ್ಟಿಯೋ
ಏಳು ಜನ್ಮಗಳ ನೋವನಿಲ್ಲಿ ಉಣಿಸಿತೋ...
ಯಾವ ಶಾಪದ ಮುಕ್ತಿಗೆ
ನೀನು ಧರೆಗಿಳಿದು ಬಂದೆಯೋ,
ಯಾರ ಕೇಳಲಿ ಈಗ ನಾ
ನೀನು ದೇವ ಯಕ್ಷ ಕಿಂ ಪುರುಷನೋ...
ನಾಲ್ಕು ದಿನದ ಮಮತೆ ಪಡೆಯಲು
ಬಂದು ನೀನು ಹೋದೆಯಾ,
ನೀನು ಆಡಿದ ಮಡಿಲದು
ಖಾಲಿಯಾಗಿದೆ ನೋಡು ಬಾ...
ವಿಧಿಯೇ ನಾನು ಏನು ಕೇಳಲಿ ನಿನ್ನಲಿ
ಕರುಳ ಹಿಂಡುವ ಈ ನೋವಲಿ,
ಬದುಕು ಇಲ್ಲಿ ನಶ್ವರ ಅನ್ನೊದಂತೂ ಸತ್ಯವೇ
ಆದರೂ ನಿನಗಿದೆಯಿಲ್ಲಿ ಕಣ್ಣೀರಿನ ಶಾಪವೂ...
ಯಾರು ಮಾಡಿದ ಪಾಪವೋ,
ನಾಲ್ಕು ದಿನಕೆ ನೀನು ಬಂದೆ ಬಾಳಿಗೆ
ಹೊರಟು ಹೋದೆ ಮತ್ತೆ ಬಾರದ ನಿನ್ನೂರಿಗೆ...
ವಿಧಿಯ ಯಾವ ಕಳ್ಳಾಟವೋ
ನಿನ್ನ ಇಲ್ಲಿ ನರಳಾಡಿಸಿತೋ,
ಯಾವ ಕಣ್ಗಳ ಕ್ರೂರ ದೃಷ್ಟಿಯೋ
ಏಳು ಜನ್ಮಗಳ ನೋವನಿಲ್ಲಿ ಉಣಿಸಿತೋ...
ಯಾವ ಶಾಪದ ಮುಕ್ತಿಗೆ
ನೀನು ಧರೆಗಿಳಿದು ಬಂದೆಯೋ,
ಯಾರ ಕೇಳಲಿ ಈಗ ನಾ
ನೀನು ದೇವ ಯಕ್ಷ ಕಿಂ ಪುರುಷನೋ...
ನಾಲ್ಕು ದಿನದ ಮಮತೆ ಪಡೆಯಲು
ಬಂದು ನೀನು ಹೋದೆಯಾ,
ನೀನು ಆಡಿದ ಮಡಿಲದು
ಖಾಲಿಯಾಗಿದೆ ನೋಡು ಬಾ...
ವಿಧಿಯೇ ನಾನು ಏನು ಕೇಳಲಿ ನಿನ್ನಲಿ
ಕರುಳ ಹಿಂಡುವ ಈ ನೋವಲಿ,
ಬದುಕು ಇಲ್ಲಿ ನಶ್ವರ ಅನ್ನೊದಂತೂ ಸತ್ಯವೇ
ಆದರೂ ನಿನಗಿದೆಯಿಲ್ಲಿ ಕಣ್ಣೀರಿನ ಶಾಪವೂ...
No comments:
Post a Comment