ಬದುಕು ಇಲ್ಲಿ ಭರವಸೆಯೂ
ನಾಳೆಯಾ ಕನಸಿಗೆ,
ಕನಸಿಲ್ಲಿ ತೋರಣವೂ
ನಾಳೆಗಳ ಪಯಣಕ್ಕೆ...
ನೆನಪುಗಳೆಲ್ಲಾ ಹಾಡಾಗಿ
ಗುನುಗುತಿವೆ ಸಂಗೀತ,
ಇಂದು ನಿನ್ನೆಗಳ ದಣಿವಿಲ್ಲಿ
ನಾಳೆಯಾ ಪಯಣಕ್ಕೆ ಅಡ್ಡಿಯಾಗದಿರಲೆಂದು...
ಕನವರಿಸು ಓ ಬದುಕೇ
ಪ್ರೀತಿಯನು ಎಂದೂ,
ನಡೆಯುತಿರಲಿ ಈ ಪಯಣ
ನಾಳೆಯಾ ನಾಳೆಗಳಲಿ ನಿತ್ಯ ನಿರಂತರ...
ಹರಸು ನೀನಿಲ್ಲಿ ಓ ಬದುಕೇ
ಭರವಸೆಯಾ ಕಿರಣಗಳ,
ಏಳು ಬೀಳುಗಳ ಕೋಟೆಯ ದಾಟಿ
ಮುನ್ನಡೆಯಬೇಕಿದೆ ಜಗದಲ್ಲಿ...
ನಾಳೆಯಾ ಕನಸಿಗೆ,
ಕನಸಿಲ್ಲಿ ತೋರಣವೂ
ನಾಳೆಗಳ ಪಯಣಕ್ಕೆ...
ನೆನಪುಗಳೆಲ್ಲಾ ಹಾಡಾಗಿ
ಗುನುಗುತಿವೆ ಸಂಗೀತ,
ಇಂದು ನಿನ್ನೆಗಳ ದಣಿವಿಲ್ಲಿ
ನಾಳೆಯಾ ಪಯಣಕ್ಕೆ ಅಡ್ಡಿಯಾಗದಿರಲೆಂದು...
ಕನವರಿಸು ಓ ಬದುಕೇ
ಪ್ರೀತಿಯನು ಎಂದೂ,
ನಡೆಯುತಿರಲಿ ಈ ಪಯಣ
ನಾಳೆಯಾ ನಾಳೆಗಳಲಿ ನಿತ್ಯ ನಿರಂತರ...
ಹರಸು ನೀನಿಲ್ಲಿ ಓ ಬದುಕೇ
ಭರವಸೆಯಾ ಕಿರಣಗಳ,
ಏಳು ಬೀಳುಗಳ ಕೋಟೆಯ ದಾಟಿ
ಮುನ್ನಡೆಯಬೇಕಿದೆ ಜಗದಲ್ಲಿ...
No comments:
Post a Comment