27 July, 2019

ನನ್ನ ಕನಸು...

ಮಗುವಾಗಿ ನಲಿಯಲು ನೀನು
ಮೈ ಮರೆತೆ ಬದುಕಲಿ ನಾನು,
ತುಂಟಾಟ ಆಡಲು ನೀನು
ಗುರುವಂತೆ ಗದರಿದೆ ನಾನು...

ನಂಬಿರುವಾ ದೈವವೇ ನೀನು
ಮಗುವಾಗಿ ಜೊತೆಯಾದೆಯಾ ಇಲ್ಲಿ,
ನೂರು ಸೋಜಿಗವೂ ನನಗೇ ಇಲ್ಲಿ
ನಿನ್ನಯಾ ಲೀಲೆಗಳಿಗೆ ಸಾಕ್ಷಿಯಾಗಿ...

ತುಸು ಕೋಪ ಮತ್ತೆ ನಗುವಲ್ಲಿ
ಸೋಲಿಸಲಾಗದ ಹಠವೂ ಜೊತೆಯಲ್ಲಿ,
ನಗಿಸಿ ನಗುವಾ ಜಾದು ನಿನ್ನದೂ
ಕಣ್ಣಂಚಲಿ ನೀರ ಜಿನುಗಿಸುವಾ ಪರಿಯಲ್ಲಿ...

ಮನೆಯೊಳಗೆ ನೀನೊಂದು ಪರಪಂಚ
ನಿನ್ನೊಳಗೆ ತುಂಬಿದೆ ಬ್ರಹ್ಮಾಂಡ,
ಮಗುವಲ್ಲಾ ನೀ ಮಾಯಾಜಾಲ
ಬದುಕ ಹರಸಿದಾ ಪುಟ್ಟ ಕಿನ್ನರೀ...

ಖುಷಿಯಲ್ಲಿ ಅರಳುತಿರು ನೀನು
ನಗೆಯಾ ದುಂಡು ಮಲ್ಲಿಗೆಯಾಗಿ,
ಉರುಳೋ ಕಾಲದ ಜೊತೆಗೆ
ಉಳಿದುಬಿಡು ಕರಗದ ಕನಸಂತೆ...

No comments:

Post a Comment