11 September, 2019

ಗುರು...

 ಅರಿವೇ ಗುರುವು ಮರೆವಿನ ಮನಸಿಗೆ
ಅರಿಯದ ಮಾತನು ಮನಸಿಗೆ ಅರಹೇ,
ಮುರಿಯದ ಮೌನವು ತಾಳ್ಮೆಗೆ ಗುರುವು
ಮರೆಯದ ವ್ಯಥೆಯಾ ಮನಸಿಗೆ ತಿಳಿಸೇ...

ತಾಳ್ಮೆಯೇ ಗುರುವು ಬದುಕಿಗೆ ಇಲ್ಲಿ
ಸುಡುವ ಕೋಪವ ಸುಡಲು ಬದುಕಲಿ,
ನಗುವೇ ಗುರುವು ನೆಮ್ಮದಿಗೆ ಇಲ್ಲಿ
ಮನಸಿನ ಗಾಯಕೆ ಇದುವೇ ಮುಲಾಮು...

ಕರುಣೆಯೇ ಗುರುವು ಮನುಜತೆಗೆ ಇಲ್ಲಿ
ಪ್ರೀತಿಯ ಪಾಠವ ಹೃದಯಕೆ ಒಪ್ಪಿಸಲು,
ಮರೆತ ಮಾನವೀಯತೆಯ ಮನಸಿಗೆ ತಿಳಿಸೇ
ಪ್ರೀತಿ ಸ್ನೇಹಗಳೇ ಗುರುಗಳು ಇಲ್ಲಿ...

ಬದುಕಿನ ಪಯಣದಿ ಗುರಿಗಳು ಹಲವು
ಗುರಿಯ ತಲುಪಲು ಗುರುಗಳು ಕೆಲವು,
ಕಾಲಚಕ್ರದಲಿ ಕಾಲವೇ ಗುರುವೂ
ಹುಚ್ಚು ಮನಸಿಗೊಂದು ಲಗಾಮು ತೊಡಿಸಲು...

No comments:

Post a Comment