26 September, 2019

ಹೃದಯ ಗೀತೆ...

ಮನಸು ಕೇಳಿದೆ ನಿನ್ನೇ ಓ ಪ್ರೀತಿಯೇ
ಹೃದಯ ಕರೆದಿದೆ ನಿನ್ನೇ ಬಾ ಪ್ರೀತಿಯೇ,
ಕನಸು ಹುಡುಕಿದೆ ಇಲ್ಲಿ ನಿನ್ನ ಸನಿಹ
ಭಾವನೆಗಳ ಜಾತ್ರೆಯಲಿ ಬಾ ತೇರನು ಏರಿ...

ಹೊಸದೊಂದು ಕನಸಿಲ್ಲಿ ಶುರುವಾಗಲಿ
ನಿನ್ನಾ ಜೊತೆ ಜೊತೆಯಲಿ ಈಗ,
ಒಲವಿನ ಹೊಸ ಹೆಜ್ಜೆ ನಿನ್ನಿಂದ
ಓ ಪ್ರೀತಿಯೇ ನಿನ್ನ ಸಹವಾಸದಿಂದ...

ಅರಳೋ ಮಲ್ಲಿಗೆಯಂತೆ ಅರಳು ನೀ
ಹೃದಯದ ನಂದನವನದಿ,
ನಗುವಾ ಗುಲಾಬಿಯಾಗು ಬದುಕಿಗೆ
ನೋವು ನಲಿವುಗಳ ಈ ಸಂತೆಯೊಳು...

ಪ್ರೀತಿಯೇ ಬದುಕಿದು ನಿನ್ನಯ ವರದಾನ
ನೀನಿಲ್ಲದೆ ಖಾಲಿ ಎಲ್ಲಾ ಇಲ್ಲಿ,
ಮೌನವು ಹಿತವಾಗಿಹುದು ನೀ ಜೊತೆಯಿರಲು
ಭಾವವೆಲ್ಲಾ ಸುಂದರ ಕಾವ್ಯ ನಿನ್ನಾ ಕನವರಿಕೆಲಿ...

No comments:

Post a Comment