09 December, 2019

ಒಲವ ಧ್ಯಾನ...

ಸೋಲು ಹಿತವಾಗಿತ್ತು ಒಲವೇ
ನಿನ್ನ ಹುಡುಕಾಟದ ಆಟದಲ್ಲಿ,
ಗೆಲ್ಲಲೇಬೇಕೆಂಬ ಹಠದೊಳಗೆ
ನಿನ್ನೇ ಮರೆತು ಹೋದೆ ಬದುಕಲಿ...

ಮತ್ತೆ ಮತ್ತೆ ಸೋಲುತ್ತಿರುವೆ ಬದುಕಲಿ
ನೀನು ನನ್ನೊಳಗಿಲ್ಲವೆಂಬ ವ್ಯಥೆಯಲಿ,
ಬದುಕನ್ನೇ ಗೆಲ್ಲುವ ಭರದಲಿ
ಕಳೆದುಕೊಂಡೆ ನನ್ನಯ ಭ್ರಮೆಯಲಿ...

ಒಲವೇ ನೀನೊಂದು ಕನಸು ಬದುಕಲಿ
ಜೊತೆಯಾಗಬೇಕೆಂಬ ಹಂಬಲವಿಲ್ಲ ಮನಸಲಿ,
ಕನಸಾಗಿಯೇ ಉಳಿದುಬಿಡು ಈ ಯಾತ್ರೆಯಲಿ
ಸೋಲುವುದ ಕಲಿತಿರುವೆ ನೀನಿಲ್ಲದೇ...

ಸೋಲಿರಲಿ ಗೆಲುವೇ ಬರಲಿ ಬದುಕಲಿ
ಕನಸೆಂದೂ ನನ್ನ ಜೊತೆಗಿದೆ ಹಗಲು ಇರುಳಲಿ,
ನೀನಿರದ ಕನಸಿಲ್ಲ ನನ್ನ ಜೊತೆಯಲಿ
ಪ್ರತಿಕ್ಷಣವೂ ಒಲವಾಗಿದೆ ಬದುಕಿನ ಯಾತ್ರೆಯಿಲ್ಲಿ...

No comments:

Post a Comment