25 November, 2019

ಪಯಣ...

ನನ್ನೊಳಗೆ ನಾನು ಮಿತಿಮೀರದಂತೆ
ಬದುಕಲ್ಲಿ ನೋವೊಂದು ಇರಬೇಕಿದೆ,
ಮನಸಿಗಾದರೂ ಸರಿ ದೇಹಕ್ಕಾದರೂ ಸರಿಯೇ
ಹಿತವಾದ ನೋವಿಲ್ಲಿ ಬೇಕಾಗಿದೆ...

ನೋವಲ್ಲೂ ನಗಲು ಕನಸೊಂದು
ಬದುಕಲ್ಲಿ ಇರಬೇಕು ಇಲ್ಲಿ,
ಕನಸಲ್ಲು ಕಾಡೋಕೆ ಈಗ
ಮನಸೊಳಗೆ ಪ್ರೀತಿ ಇರಬೇಕಿದೆ...

ಪ್ರೀತಿನ ಕಾಯೋಕೆ ಇಲ್ಲಿ
ಮನಸೊಳಗೆ ಭಾವಗಳ ಮೇಳ ನಡಿಬೇಕಿದೆ,
ಭಾವಗಳ ಜೊತೆಯಾಗಿ ಪೊಣಿಸೋದಕ್ಕೂ
ಖುಷಿಯ ಸಹಾಯ ಬೇಕಾಗಿದೆ...

ನನ್ನೊಳಗಿನ ನನ್ನ ಮರೆಸಿ
ಪ್ರೀತಿಯ ಹಂಚಿ ಮುಂದೆ ನಡಿಬೇಕಾಗಿದೆ,
ನಡಿಯೋ ಕಾಲಿಗೆ ತೊಡಕಾಗೊ
ಭಾವಗಳ ಇಲ್ಲೇ ಬಿಟ್ಟು ಮುಂದೆ ಸಾಗಬೇಕಿದೆ...

No comments:

Post a Comment