21 February, 2020

ಮಹಾದೇವ ನಮಸ್ತುಭ್ಯಂ...

ಭಕ್ತರಿಗೆ ಭೋಲೆ ಶಂಕರ
ದುಷ್ಟರಿಗೆ ರುದ್ರ ಭಯಂಕರ,
ಸೃಷ್ಟಿಗಿವನು ಲಯಕಾರಕ
ದೇವಾದಿ ದೇವ ಶಂಕರ...

ತಲೆಯ ಮೇಲೆ ಗಂಗೆಯ
ಹೊತ್ತು ನಿಂತ ಗಂಗಾಧರ,
ಚಂದ್ರನನ್ನು ಮುಡಿದು ನಿಂತ
ಇವನು ಸೋಮಶೇಖರ...

ಕೊರಳ ಮಾಲೆ ವಾಸುಕಿ
ನಾಗಭರಣನಾದ ಶಂಕರ,
ಮೈಯ ಮೇಲೆ ವಿಭೂತಿಯೂ
ರುದ್ರಾಕ್ಷಿ ಇವಗೆ ಪ್ರೀಯವೂ...

ಉಮಾಪತಿಯೂ ಶಂಕರ
ಜಗಕೆ ಅರ್ಧನಾರೀಶ್ವರ,
ವೀರಭದ್ರನಿವ ಶಂಕರ
ಲಯಕಾರ್ಯ ನಡೆಸಲು ಆಡ್ವನಿಲ್ಲಿ ತಾಂಡವ...

ಆದಿ ಮಾಯೆ ಶಂಕರ
ಆದಿ ಯೋಗಿಯಿವನು ಶಂಕರ,
ಆದಿ ಅಂತ್ಯವಿಲ್ಲದ ನಿರಾಕಾರ ನಿರ್ಗುಣ
ಹೇ ನಂದಿವಾಹನ ನಮೋ ಶಿವ ಶಂಭುವೇ...

No comments:

Post a Comment