29 February, 2020

ಕನಸೇ...

ಒಲವೇ ನಿನ್ನಯ ಬಣ್ಣವು ಯಾವುದೂ
ಅದರಲ್ಲಿಯೇ ನಾ ಕಾಣುವೇ ಕಾಮನಬಿಲ್ಲನು,
ಓ ಗೆಳತಿಯೇ ಹೇಳು ನೀನೀಗ
ನಾನೆಂದಿಗೂ ಪ್ರೇಮಿಯೇ ನಿನ್ನೊಲವಿಗೆ...

ಕರಗಲು ಕನಸದು ನಿನ್ನಾ ನೆನಪಲ್ಲೇ
ಕರಗುವೆ ನಾ ನಿನ್ನಾ ಒಲವಲ್ಲೇ,
ನಲ್ಲೇ ನಿನ್ನ ನೆನಪದು ಸುಂದರ ಕಾವ್ಯ
ಬರೆದಿಡುವೆ ಸವಿನೆನಪುಗಳ ನಾನಲ್ಲೇ...

ನಿನ್ನ ಮೌನವು ಹಿತವಾಗಿದೆ ಕನಸಲ್ಲಿ
ಬರಬಾರದೇ ಒಮ್ಮೆ ನೀನಿಲ್ಲಿ,
ಕರಗದ ಕನಸಾಗಿ ಕಣ್ಮುಂದೆ
ಒಲವೇ ಒಲವಿಂದ ಉಲಿಯುತ್ತಾ...

ಪ್ರತಿ ಹಗಲಲೂ ನೀನೇ ಬೆಳಗು
ಪ್ರತಿ ಇರುಳಲೂ ನೀನೊಂದು ಬೆರಗು,
ಚಂದದ ಚಂದಿರನ ಓ ಬೆಳದಿಂಗಳೇ
ಭಾವಗಳ ಮೋಡದೊಳಗೆ ನೀನೊಂದು ಮಾಯೆ...

No comments:

Post a Comment