28 June, 2020

ತಪಸ್ಸು...

ದಿನ ಮುಗಿಯೋ ಹೊತ್ತಿಗೆ
ಕಾಡುವವು ಕನಸುಗಳು ಮೆತ್ತಗೆ,
ಮನಸಿಲ್ಲಿ ನೆನಪುಗಳ ಕೊಟ್ಟಿಗೆ
ಬದುಕೀಗ ಮೌನಕೆ ಕರೆಕೊಟ್ಟಿದೆ...

ಕಾಲವು ಪ್ರಶ್ನೆಗಳ ಮುಂದೆ ಇಟ್ಟಿದೆ
ಬದುಕಿಲ್ಲಿ ಉತ್ತರವ ಹುಡುಕಿದೆ,
ಸಂಶಯಗಳು ಇಲ್ಲಿ ಬೆಟ್ಟದಷ್ಟಿವೆ
ಮನಸಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ...

ಅಗ್ನಿಯ ಗುಣವದುವೆ ಸುಡುವುದು
ತನ್ನೆದುರು ಬಂದ ವಸ್ತುಗಳ ನುಂಗುತಾ,
ಮನದೊಳಗಿನ ಅಗ್ನಿಯದು ಸುಡುವುದು
ಮನಸಿನ ಜೊತೆಯಲಿ ಬದುಕನು...

ನೆನಪುಗಳು ಗೀರಿದ ಬೆಂಕಿಗೆ
ಬದುಕು ಆಗಲೇಬಾರದು ಯಜ್ಞಶಾಲೆ,
ಅರ್ಪಿಸಲು ಹವಿಸ್ಸಲ್ಲ ಮನಸ್ಸು
ಬದುಕಿಲ್ಲಿ ಬರೀಯ ಒಂದು ತಪಸ್ಸು... 

No comments:

Post a Comment