ಹುಟ್ಟು ನಮ್ಮಯ ಆಯ್ಕೆಯಲ್ಲ
ಬದುಕುವ ರೀತಿಯಿಲ್ಲಿ ಆಯ್ಕೆಯಷ್ಟೇ,
ಒಲವೇ ನೀನು ಮನಸಿನ ಆಯ್ಕೆ
ಜೊತೆಗಿರುವ ಸಮಯ ಕಾಲದ ನಿರ್ಧಾರವಷ್ಟೇ...
ಜೀವಕ್ಕೆ ಇಲ್ಲಿ ಹೆಸರಿದೆಯಷ್ಟೇ
ಬದುಕಿಗೆ ಇಲ್ಲಿ ಹೆಸರಿಲ್ಲಾ,
ಭಾವನೆಗಳಿಗೆ ಹೆಸರಿದೆಯಷ್ಟೇ
ಕನಸಿಗೆ ಇಲ್ಲಿ ಹೆಸರಿಲ್ಲಾ...
ಆಸೆಗಳಿಗೆ ಇಲ್ಲಿ ಆಯ್ಕೆಗಳಿಲ್ಲಾ
ಆಯ್ಕೆಗಳಿರುವುದು ಅವಕಾಶಗಳಲ್ಲಿ,
ಸಾಧನೆಗೆ ಹೆಸರಿದೆಯಿಲ್ಲಿ
ಶ್ರಮಕ್ಕೆ ಯಾವುದೇ ಹೆಸರಿಲ್ಲಾ....
ಬದುಕು ಇಲ್ಲಿ ನೀಲಿ ನೀಲಿ
ಆಯ್ಕೆಗಳ ಆಟದೊಳು,
ತೀರ ಕಾಣದ ಸಾಗರದಂತೆ
ಬದುಕು ಅದಮ್ಯ ಅವಕಾಶ...
ಬದುಕುವ ರೀತಿಯಿಲ್ಲಿ ಆಯ್ಕೆಯಷ್ಟೇ,
ಒಲವೇ ನೀನು ಮನಸಿನ ಆಯ್ಕೆ
ಜೊತೆಗಿರುವ ಸಮಯ ಕಾಲದ ನಿರ್ಧಾರವಷ್ಟೇ...
ಜೀವಕ್ಕೆ ಇಲ್ಲಿ ಹೆಸರಿದೆಯಷ್ಟೇ
ಬದುಕಿಗೆ ಇಲ್ಲಿ ಹೆಸರಿಲ್ಲಾ,
ಭಾವನೆಗಳಿಗೆ ಹೆಸರಿದೆಯಷ್ಟೇ
ಕನಸಿಗೆ ಇಲ್ಲಿ ಹೆಸರಿಲ್ಲಾ...
ಆಸೆಗಳಿಗೆ ಇಲ್ಲಿ ಆಯ್ಕೆಗಳಿಲ್ಲಾ
ಆಯ್ಕೆಗಳಿರುವುದು ಅವಕಾಶಗಳಲ್ಲಿ,
ಸಾಧನೆಗೆ ಹೆಸರಿದೆಯಿಲ್ಲಿ
ಶ್ರಮಕ್ಕೆ ಯಾವುದೇ ಹೆಸರಿಲ್ಲಾ....
ಬದುಕು ಇಲ್ಲಿ ನೀಲಿ ನೀಲಿ
ಆಯ್ಕೆಗಳ ಆಟದೊಳು,
ತೀರ ಕಾಣದ ಸಾಗರದಂತೆ
ಬದುಕು ಅದಮ್ಯ ಅವಕಾಶ...
No comments:
Post a Comment