21 February, 2021

ಮೌನರಾಗ...

ಮಾತಾಡು ಬಾ ಓ ಮೌನವೇ
ಮುದ್ದಾಡು ಬಾ ನೀನೀಗಲೇ,
ನೆನಪುಗಳು ಕಾಡುತಿವೆ ನೀನಿಲ್ಲದೇ
ಕನಸುಗಳು ಕರಗಿವೆ ಮಾತಿಲ್ಲದೇ...

ಉಸಿರಿಲ್ಲಿ ಎಣಿಸುತಿದೆ ಸದ್ದಿಲ್ಲದೇ
ಎದೆಬಡಿತ ನೀನೇ ಓ ಮೌನವೇ,
ಬರುತಿರುವೆ ನೀನು ಬರೀ ಕನಸಲೇ
ಮರುಳೀಗ ಮನಸು ಬರೀ ನೆನಪಲೇ...

ಶುರುವಾಯ್ತು ಸ್ನೇಹ ಮಾತಿಂದಲೇ
ಹೊಸದಾದ ಪ್ರೀತಿ ಮನಸಿಂದಲೇ,
ಖಾಲಿಯಿಲ್ಲಿ ಮನಸು ನೀನಿಲ್ಲದೇ
ಮಾತಾಗು ಸಾಕು ಓ ಮೌನವೇ...

ನಾಳೆಗಳ ಕನಸು ಅದು ನಿನ್ನಿಂದಲೇ
ಮಾತಾಗು ಮುನಿಸೇ ನೀನೀಗಲೇ,
ಅಪ್ಪಿಕೊಂಡಿದೆ ಮನಸು ಒಲವಿಂದಲೇ
ಒಪ್ಪಿಕೊಳ್ಳೊಣ ಬಾ ಈ ಮೌನದೇ...

No comments:

Post a Comment