10 February, 2021

ಕರ್ಮಣ್ಯೇ ವಾಧಿಕಾರಸ್ತೇ...

ಅಹಂಕಾರವಿಲ್ಲಿ ಕ್ಷಣಿಕ ಕೇಳು ಮನುಜಾ
ನಿನ್ನ ಕರ್ಮಗಳಿಗೆ ನೀನೇ ಹೊಣೆಯು ಇಲ್ಲಿ,
ಪಾಪ ಪುಣ್ಯವೆಲ್ಲಾ ಬರೀಯ ಕಥೆಯೂ ಅಲ್ಲಾ
ನಿನ್ನ ಕರ್ಮಗಳೆಲ್ಲಾ ಮರಳಿ ಬರುವುದಿಲ್ಲಿ...

ಕಾಲ ಕಲಿಸೋ ಪಾಠ ಅಲ್ಲಾ
ಅದು ಕಾಲ ಕೊಡುವ ಏಟು,
ಮನುಜ ನೀನು ಆಡೋ ಆಟಕ್ಕಿಂತ
ತುಂಬಾ ಘೋರ ಕಾಲ ಆಡಿಸೋ ಆಟ...

ಮೂಡ ಮನವೇ ಕೇಳು ಇಲ್ಲಿ ಸ್ವಲ್ಪ
ನಿನ್ನ ಕೋಪ ತಾಪ ಎಲ್ಲಾ ಬರೀಯ ಶೂನ್ಯವಿಲ್ಲಿ,
ಈ ಸೃಷ್ಠಿಯೊಳಗೆ ನೀನೊಂದು ಅಣುವು ಅಷ್ಟೇ
ನಿನ್ನ ಹಾರಾಟವೆಲ್ಲಾ ಬರೀಯ ವ್ಯರ್ಥವಷ್ಟೇ...

ಕಾಲ ಚಕ್ರದೊಳಗೆ ನೀನಿಲ್ಲಿ ಕರ್ಮಯೋಗಿ
ನಿನ್ನ ಕರ್ಮಫಲಗಳ ಜೊತೆ ನೀನು ಬಂಧಿಯಿಲ್ಲಿ,
ಎಲ್ಲಾ ಕೆಟ್ಟ ಕರ್ಮಗಳಿಗೂ ಶಿಕ್ಷೆಯೂ ಇಹುದು ಇಲ್ಲೇ
ನಿನ್ನ ಕರ್ಮ ಚಕ್ರದೊಳಗೆ ಬಂಧಿಯಾಗದಿರು ನೀನು...





No comments:

Post a Comment