ಬುದ್ಧನಾಗಲಾರೆ ಈಗ
ಪ್ರೀತಿಯಲಿ ಬಿದ್ದ ಮೇಲೆ,
ತ್ಯಜಿಸಲಾರೆ ಮನದ ಆಸೆಗಳ
ನಿನ್ನೊಲವ ತುಂಬು ಹಂಬಲದೀ...
ಕನಸುಗಳ ಕೊಲ್ಲಲಾರೆ ಮನದೇ
ನೆನಪುಗಳ ಮರೆತುಬಿಡಲು,
ನಿನ್ನೆಗಳ ಕಸಿದುಕೊಳ್ಳಲಾರೆ
ನೆನಪುಗಳ ಮಡಿಲಿನಿಂದ...
ಹುಸಿಯ ನುಡಿಯಲಾರೆ ಒಲವೇ
ಜಗವ ಮೆಚ್ಚಿಸಲು ಇಲ್ಲಿ,
ಆತ್ಮಸಾಕ್ಷಿಗಿಂತ ಮತ್ತೇನು ಬೇಕು
ನಮ್ಮೊಲವ ಪಯಣದೊಳಗೆ...
ಪ್ರೀತಿಗಿಂತ ದೊಡ್ಡ ಅಹಿಂಸೆಯಿಲ್ಲ
ನಿನ್ನೆ ಇಂದು ನಾಳೆಗಳಲೂ ಕೂಡ,
ಪರಿಪೂರ್ಣ ಪ್ರೇಮದಲ್ಲಿ ಹಿಂಸೆಯಿಲ್ಲ
ಒಲವು ಇಲ್ಲಿ ಬದ್ಧತೆಯಾಗಿಹುದಲ್ಲ...
No comments:
Post a Comment