31 March, 2021

ಕನಸು...

ಒಲವಿನ ಹೂರಣ ನೀನು
ಬದುಕಿಗೆ ತೋರಣವೂ,
ಓ ಕನಸೇ ಬದುಕಲಿ ನೀನು
ಚಂದ್ರ ಚೆಲ್ಲಿದ ಬೆಳದಿಂಗಳು...

ಆಗಸಕೆ ಏಣಿಯ ಇಟ್ಟು
ಮನದೊಳಗೆ ಆಸೆಯನಿಟ್ಟೆ,
ಓ ಕನಸೇ ಮಾಯಾವಿ ನೀನು
ಭ್ರಮೆಯೊಳಗೆ ಸಿಲುಕಿಸಿಬಿಟ್ಟೆ...

ನೆನಪುಗಳ ಕೂಡಿಸಿ ಇಟ್ಟು
ಮನಸೊಳಗೆ ಕಚಗುಳಿ ಇಟ್ಟೆ,
ಕಾಣದ ಲೋಕಕೆ ಲಗ್ಗೆಯನಿಟ್ಟು
ಕಾಡುವ ಕಿನ್ನರ ನೀನಾದೆ...

ಜೊತೆಗಿರೆ ನೀನು ಬಾಳಲಿ
ಬದುಕಿಲ್ಲಿ ಪ್ರೇಮಲೋಕ,
ಕರಗಿ ಹೋದರೆ ಕನಸೇ ನೀನು
ಕತ್ತಲು ಇಲ್ಲಿ ಬಾಳಿನ ಯಾತ್ರೆ...

1 comment:

  1. ಖಂಡಿತ ಮನಸ್ಸನ್ನು ಘಾಸಿ ಮಾಡುವುದಿಲ್ಲ ಮಾಯಾವಿ...

    ReplyDelete