17 August, 2021

ಮನವಿ...

ಓ ನಿದಿರೆಯೇ ನಿನ್ನಲ್ಲಿ ಮನವಿ ಇದೆ
ಹೇಳೊಕು ಜೊತೆಯಲ್ಲಿ ಅಳುಕೂ ಇದೆ...
ಕಣ್ಣ ರೆಪ್ಪೆಯಲಿ ನೀನು ಅಡಗಿರುವೆ
ಕಣ್ಣ ಮುಚ್ಚಿದಾಗ ಯಾಕೋ ಮಾಯವಾಗುವೆ...

ಓ ಕನಸೇ ನಿನ್ನಲ್ಲೊಂದು ಮನವಿ ಇದೆ
ಹೇಳೊಕು ಮನಸೀಗೆ ಮುಜುಗರ ಹೆಚ್ಚಾಗಿದೆ,
ಕಾಡೋಕು ನಿನಗೆ ಹೊತ್ತು ಗೊತ್ತಿಲ್ಲವೇ
ನನ್ನನ್ನೇ ನಾ ಮರೆತಾಗ ಬಡಿದೆಬ್ಬಿಸುವೆ...

ಓ ನೆನಪೇ ನಿನ್ನಲ್ಲೊಂದು ಮನವಿ ಇದೆ
ಒಂದೊಮ್ಮೆ ನೀನು ಸುಮ್ಮನಿರಬಾರದೇ,
ನೀನು ಮೌನ ಮುರಿದಾಗಲೆಲ್ಲಾ ಇಲ್ಲಿ ನೋವಿದೆ
ಕಣ್ಣಿಂದ ನಿದಿರೆಯೂ ಕೈ ಜಾರಿದೆ...

ಓ ಬದುಕೇ ನಿನಗೊಂದು ಮನವಿಯಿದೆ
ಕಾಲಕ್ಕೆ ನೀನಿಲ್ಲಿ ತಲೆ ಬಾಗಬೇಕಿದೆ,
ಕಾಲದ ಜೊತೆಗಿನ ಗುದ್ದಾಟದಲಿ
ನೀನಿಲ್ಲಿ ಕಲಿಯೋದು ಬಹಳಷ್ಟಿದೆ...

No comments:

Post a Comment