29 August, 2021

ಅಲೆಮಾರಿ...

ಆಸೆಗಳ ಗಂಟುಮೂಟೆ ಕಟ್ಟಿ
ಕನಸುಗಳ ಬೆನ್ನಿಗೇರಿಸಿಕೊಂಡು,
ಊರುಕೇರಿಗಳ ಸುತ್ತಿ ಹೊರಟ
ಬದುಕೇ ನೀನು ಅಲೆಮಾರಿ...

ಸಂಬಂಧಗಳ ಕೋಟೆಯ ಕಟ್ಟಿ
ನೆಮ್ಮದಿಯ ಇಲ್ಲಿ ಪಣಕ್ಕೆ ಇಟ್ಟು,
ಸಂತೋಷವನು ಜಗದಲಿ ಹುಡುಕುತ್ತಾ
ಮೈ ಮರೆತ ಮನಸೇ ಇಲ್ಲಿ ಅಲೆಮಾರಿ...

ದ್ವೇಷನಾ ಮನಸಲಿ ಬಚ್ಚಿಟ್ಟುಕೊಂಡು
ಅಸೂಯೆನಾ ಹರಡುತ್ತಾ ಇಲ್ಲಿ,
ಪ್ರೀತಿನಾ ಹುಡುಕುತಲಿರುವಾ
ಓ ಮನುಜಾ ನೀನು ಅಲೆಮಾರಿ...

ಶ್ರದ್ಧೆಯ ಇಲ್ಲಿ ಗಾಳಿಗೆ ತೂರಿ
ಉಪಕಾರ ಸ್ಮರಣೆಯ ಮರೆತೇಬಿಟ್ಟು,
ಭಗವಂತನ ಹುಡುಕುತ್ತಾ ಹೊರಟಿಹ
ಈ ಲೋಕವೇ ಇಲ್ಲಿ ಅಲೆಮಾರಿ...

No comments:

Post a Comment