ಆಟ ಬರೀಯ ಹುಡುಗಾಟ
ಜೀವನವೆಲ್ಲಾ ಬರೀಯ ಹುಡುಕಾಟ,
ಕಾಲದೊಂದಿಗೆ ರಂಪಾಟ
ನೋವು ನಲಿವುಗಳ ಜೊತೆಗೆ ಗುದ್ದಾಟ...
ಬಾಲ್ಯದಲಿ ಸಣ್ಣಪುಟ್ಟ ಕೆಲಸಗಳಲಿ
ಖುಶಿಯ ಹುಡುಕಾಟ,
ಹರೆಯದಲಿ ಕನಸುಗಳ ಬೆನ್ನೇರಿ
ಪ್ರೀತಿ ಸ್ನೇಹದ ಹುಡುಕಾಟ...
ನಡು ವಯಸ್ಸಿನಲಿ ಸಂಸಾರ ಸಾಗರದೊಳಗೆ
ಜವಾಬ್ದಾರಿಗಳ ಜೊತೆಗೆ ಈಜಾಟ,
ಹಾರಾಟ ಚೀರಾಟ ಮಾಡುತ್ತಾ
ಕಳೆದುಹೋಯ್ತು ಹುಡುಗಾಟ...
ಜೀವನದ ಮುಸ್ಸಂಜೆಯ ಕಾಲಕ್ಕೆ
ನೆಮ್ಮದಿಗಾಗಿ ಹುಡುಕಾಟ,
ಆರೈಕೆ ಓಲೈಕೆ ಮಾಡುತ್ತಾ
ಬಡವಾಯ್ತು ಬದುಕೀಗ...
No comments:
Post a Comment