30 October, 2021

ಗೊಂಬೆಯಾಟ...

ಇರುವುದು ಒಂದೇ ಮನುಷ್ಯ ಜನ್ಮ
ಬಾಳಿ ಬದುಕಬೇಕಿಲ್ಲಿ,
ಅವನ ಕರೆ ಬಂದಾಗ ಎಲ್ಲವ ಬಿಟ್ಟು
ಹೊರಟು ಹೋಗಬೇಕಲ್ಲಿ...

ಅಲ್ಲಿರುವುದು ನಮ್ಮಯ ಮನೆಯೂ
ಇಲ್ಲಿರುವುದು ನಾವು ಸುಮ್ಮನೆಯೂ,
ಈ ಲೋಕದ ಋಣವು ಮುಗಿಯುತಿರಲು 
ಹಿಂತಿರುಗಿ ಹೋಗಲೇಬೇಕಲ್ಲಿ...

ನಾಳೆಯ ಚಿಂತೆಯು ನಮಗಿಲ್ಲಿ
ಅವನ ಲೆಕ್ಕಾಚಾರವೇ ಮೊದಲಿಲ್ಲಿ,
ಅರಳೋ ಹೂವು ಬಾಡುವ ಮುನ್ನ
ಅವನು ಆಟವನೇ ಮುಗಿಸುವಾ...

ನಗುವಿಗೆ ಕಾರಣ ಏನಿಲ್ಲಾ
ನೋವಿಗೆ ಚಿಂತೆಯು ಬೇಕಿಲ್ಲಾ,
ಕಾಲನು ಆಡೋ ಆಟದಲಿ
ಕೈ ಗೊಂಬೆಗಳೇ ನಾವೆಲ್ಲಾ...

No comments:

Post a Comment